ಸೊರಬ: ಬಹು ಬೆಳೆ ತೋಟಕ್ಕೆ ಆಕಸ್ಮಿಕ ಬೆಂಕಿ; ಅಪಾರ ಪ್ರಮಾಣದ ಬೆಳೆ ನಾಶ - kannada top news
ಶಿವಮೊಗ್ಗ: ಅನಾನಸ್, ಅಡಕೆ, ಶುಂಠಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಪ್ರಮಾಣದ ಬೆಳೆ ಸುಟ್ಟು ನಾಶವಾಗಿರುವ ಘಟನೆ ಸೊರಬ ತಾಲೂಕು ಚಂದ್ರಗುತ್ತಿ ಬಳಿಯ ಕಮರೂರು ಗ್ರಾಮದಲ್ಲಿ ನಡೆದಿದೆ. ಜಮೀನಿನ ಮಾಲೀಕ ಅಬ್ಸರ್ ಮೊಹಮ್ಮದ್ 10 ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಅನಾನಸ್, ನಾಲ್ಕು ಎಕರೆಯಲ್ಲಿ ಶುಂಠಿ ಬೆಳೆದಿದ್ದರು. ಉಳಿದ ಎರಡು ಎಕರೆಯಲ್ಲಿ ಅಡಕೆ ಸಸಿಗಳೂ ಸೇರಿದಂತೆ 40 ತೆಂಗಿನ ಸಸಿಗಳನ್ನು ಬೆಳೆಸುತ್ತಿದ್ದರು. ಬೆಳೆಗಳಲ್ಲದೇ ಬೆಳೆಗೆ ನೀರು ಹಾಯಿಸಲು ಹಾಕಿದ್ದ ಪೈಪ್ಗಳು ಬೆಂಕಿಗೆ ಆಹುತಿಯಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ಆರಿಸಿದ್ದಾರೆ. ಅಕ್ಕಪಕ್ಕದ ತೋಟಗಳಿಗೆ ಬೆಂಕಿ ಹರಡುವುದನ್ನು ತಡೆದಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಾಜಕೀಯ ಪಕ್ಷಗಳ ಪೋಸ್ಟರ್ಗೆ ಬಣ್ಣ ಬಳಿಯುತ್ತಿರುವ ಪಾಲಿಕೆ ಸಿಬ್ಬಂದಿ: ವಿಡಿಯೋ