ಕರ್ನಾಟಕ

karnataka

accident-in-between-tempo-traveler-and-cycle-in-mysore

ETV Bharat / videos

Videos: ಟೆಂಪೋ ಟ್ರಾವೆಲರ್​ ಚಕ್ರಕ್ಕೆ ಸಿಲುಕಿ ಬಾಲಕ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - ETV Bharath Kannada news

By

Published : Aug 12, 2023, 6:32 PM IST

ಮೈಸೂರು: ಸೈಕಲ್​ನಲ್ಲಿ ಶಾಲೆಯಿಂದ ಮರಳುತ್ತಿರುವಾಗ ಟೆಂಪೋ ಟ್ರಾವೆಲರ್​ಗೆ ಗುದ್ದಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಯಳಂದೂರಿನ ರಾಮಣ್ಣ ಎಂಬುವರ ಪುತ್ರ ಬಾಲಾಜಿ ಅಲಿಯಾಸ್ ತಿರುಪತಿ ಮೃತ ಬಾಲಕ. ಸೈಕಲ್​ನಲ್ಲಿದ್ದ ಮತ್ತೊಬ್ಬ ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸೈಕಲ್​​ನಲ್ಲಿ ಇಬ್ಬರು ಇದ್ದು, ಒಬ್ಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.  

ಸಿಸಿಟಿವಿಯಲ್ಲಿ ಸೆರೆಯಾದ ಸೈಕಲ್​ನಲ್ಲಿ ಇಬ್ಬರು ಬರುತ್ತಿರುವುದು ಕಾಣುತ್ತದೆ. ವೇಗವಾಗಿ ಬಂದ ಸೈಕಲ್​ ಸರ್ಕಲ್​ ಬಳಿ ನಿಯಂತ್ರಣ ತಪ್ಪಿದೆ. ನಾಲ್ಕು ರಸ್ತೆ ಸೇರುವ ಜಾಗವಾದ್ದರಿಂದ ಬಾಲಕ ವಾಹನ ಬರುವುದನ್ನು ಗಮನಿಸಿದರೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗದೇ ಗುದ್ದಿದ್ದಾನೆ. ಈ ವೇಳೆ ಒಬ್ಬ ಬಾಲಕ ಟೆಂಪೋ ಟ್ರಾವಲರ್​ನ ಹಿಂಬಾದ ಚಕ್ರಕ್ಕೆ ಸಿಲುಕಿದ್ದಾನೆ. ಆತನ ಮೇಲೆ ಟಿಟಿ ಹರಿದು ಹೋಗಿದೆ. ಇದರಿಂದ ಆತನಿಗೆ ಬಾಲಾಜಿ ಅಲಿಯಾಸ್ ತಿರುಪತಿ ಮೃತಪಟ್ಟಿದ್ದಾನೆ. 

ಬಾಲಾಜಿ ಅಲಿಯಾಸ್ ತಿರುಪತಿ 10ವರ್ಷದವನಾಗಿದ್ದು, ಐದನೇ ತರಗತಿ ಓದುತ್ತಿದ್ದ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಇದರ ಆಧಾರದಲ್ಲಿ ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬಿಬಿಎಂಪಿ ಅಗ್ನಿ ದುರಂತ.. ಮೂವರ ವಿರುದ್ಧ ಎಫ್​ಐಆರ್ ದಾಖಲು

ABOUT THE AUTHOR

...view details