ಟಿಪ್ಪರ್ ಬೈಕ್ ನಡುವೆ ಅಪಘಾತ, ಹೊತ್ತಿ ಉರಿದ ವಾಹನಗಳು: ವಿದ್ಯಾರ್ಥಿ ಸಾವು - ETV Bharath Kannada news
ಪಶ್ಚಿಮ ಬಂಗಾಳ(ಸಿಲಿಗುರಿ): ಉತ್ತರ ಬಂಗಾಳ ವಿಶ್ವವಿದ್ಯಾಲಯದ ಗೇಟ್ 2 ಬಳಿ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಬೈಕ್ ಮತ್ತು ಟಿಪ್ಪರ್ ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವಿವಿಯ ವಿದ್ಯಾರ್ಥಿ ಅನಂತ ಸಹಾ(42) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಬೈಕ್ಗೆ ಬೆಂಕಿ ತಗುಲಿದ್ದು, ಅದು ಲಾರಿಗೂ ಹರಡಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ವಾಹನ ಅಪಘಾತ ಸ್ಥಳಕ್ಕೆ ಆಗಮಿಸಿತು. ಕೂಡಲೇ ಬೆಂಕಿ ನಂದಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಅತೀ ವೇಗವಾಗಿ ಲಾರಿ ನೋಡಿಸಿಕೊಂಡು ಬಂದ ಕಾರಣ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಘಟನೆ ಕೂಡಲೇ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Last Updated : Feb 3, 2023, 8:38 PM IST