ನೆಲಮಂಗಲದಲ್ಲಿ ಲಾರಿ ಮತ್ತು ಆಂಬ್ಯುಲೆನ್ಸ್ ನಡುವೆ ಅಪಘಾತ.. ಎರಡೂ ವಾಹನಗಳು ಪಲ್ಟಿ - ಎರಡೂ ವಾಹನಗಳು ನೆಲಕ್ಕೆ ಉರುಳಿ
ಬೆಂಗಳೂರಿನ ಹೊರವಲಯದ ನೆಲಮಂಗಲದ ಗುಂಡೇನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಲಾರಿ ಮತ್ತು ಆಂಬ್ಯುಲೆನ್ಸ್ ನಡುವೆ ಅಪಘಾತ ಸಂಭವಿಸಿದ್ದು, ಎರಡೂ ವಾಹನಗಳು ನೆಲಕ್ಕೆ ಉರುಳಿ ಬಿದ್ದಿವೆ. ಅದೃಷ್ಟವಶಾತ್ ಆಂಬ್ಯುಲೆನ್ಸ್ನಲ್ಲಿ ರೋಗಿಗಳು ಇರಲಿಲ್ಲ. ಎರಡೂ ವಾಹನಗಳು ಪಲ್ಟಿ ಹೊಡೆದ ಪರಿಣಾಮ ಘಟನಾ ಸ್ಥಳದಿಂದ ಮಹಿಮಾಪುರ ಗೇಟ್ವರೆಗೆ ಸುಮಾರು 2 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಸುಗಮ ಸಂಚಾರಕ್ಕೆ ಅನುಕೂಲ ಮಾಡಲು ಹರಸಾಹಸಪಟ್ಟರು.
Last Updated : Feb 3, 2023, 8:38 PM IST