ಕರ್ನಾಟಕ

karnataka

ಪುತ್ರ ಅಭಿಷೇಕ್ ಜೊತೆ ಸುಮಲತಾ ಮಸ್ತ್ ಸ್ಟೆಪ್

ETV Bharat / videos

ಪುತ್ರ ಅಭಿಷೇಕ್ ಜೊತೆ ಸುಮಲತಾ ಸಖತ್​ ಎಂಜಾಯ್​: ವಿಡಿಯೋ - Abhishek ambareesh wedding

By

Published : Jun 5, 2023, 10:59 PM IST

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ​ ಸುಪುತ್ರ ಅಭಿಷೇಕ್ ಅಂಬರೀಶ್ ತಮ್ಮ ಗೆಳತಿ‌ ಅವಿವಾ ಜೊತೆ ಸೋಮವಾರ ಸಪ್ತಪದಿ ತುಳಿದಿದ್ದಾರೆ‌.‌ ಫ್ಯಾಷನ್ ಡಿಸೈನರ್​ ಅವಿವಾ ಬಿದ್ದಪ್ಪರೊಂದಿಗೆ ಅಭಿಷೇಕ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ‌. ವಿವಾಹ ಸಮಾರಂಭಕ್ಕೂ ಮುನ್ನ ಅಭಿಷೇಕ್ ಅಂಬರೀಶ್ ನಿವಾಸದಲ್ಲಿ‌ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಅರಿಶಿಣ ಶಾಸ್ತ್ರದ ಸಂದರ್ಭದಲ್ಲಿ ಗೋಲ್ಡನ್ ಕಲರ್ ಕಾಸ್ಟೂಮ್​ನಲ್ಲಿ ಜ್ಯೂನಿಯರ್​ ಅಂಬರೀಶ್​ ಮಿಂಚಿದ್ದಾರೆ. ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಮಗ ಅಭಿ ಜೊತೆ ಸುಮಲತಾ ಅಂಬರೀಶ್ ಮಸ್ತ್ ಸ್ಟೆಪ್ ಹಾಕುವ ಮೂಲಕ ಎಂಜಾಯ್ ಮಾಡಿದ್ದಾರೆ‌.

ಕಾರ್ಯಕ್ರಮದಲ್ಲಿ ಅಭಿಷೇಕ್ ಜೊತೆ ಪ್ರಿಯಾಂಕಾ ಉಪೇಂದ್ರ, ಪ್ರಜ್ವಲ್ ದೇವರಾಜ್‌, ಅವರ ಪತ್ನಿ ರಾಗಿಣಿ ಚಂದನ್, ಸುಮಲತಾರ ಸಹೋದರಿಯರು ಹಾಗೂ ಸ್ನೇಹಿತರು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಮೆಹಂದಿ ಕಾರ್ಯಕ್ರಮದ ವಿಡಿಯೋ ಮಾಡಲಾಗಿದ್ದು, ಅಂಬರೀಶ್ ಸಿನಿಮಾದ ಡೈಲಾಗ್​ನೊಂದಿಗೆ ಈ ವಿಡಿಯೋ ಆರಂಭವಾಗುವುದು ವಿಶೇಷ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಅದ್ದೂರಿ ಮದುವೆ ನಡೆದಿದೆ. ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್​​ಗಳಾದ ರಜನಿಕಾಂತ್, ಕಿಚ್ಚ ಸುದೀಪ್, ರಾಕಿಂಗ್​ ಸ್ಟಾರ್​ ಯಶ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತೆಲುಗು ನಟ ಮೋಹನ್ ಬಾಬು ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿ ವಧು-ವರರಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:ಪ್ರೀತಿಸಿದ ಹುಡುಗಿ ಜೊತೆ ಹಸೆಮಣೆ ಏರಿದ ಅಭಿಷೇಕ್​ ಅಂಬರೀಶ್​: ಜೂ.7ರಂದು ಆರತಕ್ಷತೆ

ABOUT THE AUTHOR

...view details