ಕರ್ನಾಟಕ

karnataka

ಗಾಯಾಳುವನ್ನು ವಿಚಾರಿಸುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat / videos

ಅಪಘಾತದಲ್ಲಿ ಗಾಯಗೊಂಡ ಯುವಕನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೃಹ ಸಚಿವ ಆರಗ - ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Mar 3, 2023, 5:25 PM IST

ಶಿವಮೊಗ್ಗ:ಹಸು ಅಡ್ಡ ಬಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಇಂದು ನಡೆದಿದೆ. ಇಂದು ತೀರ್ಥಹಳ್ಳಿ ತಾಲೂಕು ಗುಡ್ಡೆಕೊಪ್ಪದ ನಿವಾಸದಿಂದ ಶಿವಮೊಗ್ಗದ ಮತ್ತೂರು ಗ್ರಾಮಕ್ಕೆ ಆಗಮಿಸುವ ಮಾರ್ಗ ಮಧ್ಯೆ ಬೇಗುವಳ್ಳಿ ಗ್ರಾಮದ ಬಳಿ ಹಸು ಅಡ್ಡ ಬಂದು ಬೈಕ್​ ನಿಯಂತ್ರಣ ತಪ್ಪಿ ಬಿದ್ದು ಯುವಕ ಗಾಯಗೊಂಡಿದ್ದ‌ನು. ಈತ ತೀರ್ಥಹಳ್ಳಿ ತಾಲೂಕು ಸಿಂಗನಬಿದರೆ ಗ್ರಾಮದ ಬಳಿಯ ಹಳಗದ ನಿವಾಸಿ ಗಾಯಗೊಂಡಿದ್ದನು.

ಗಾಯಗೊಂಡ ಯುವಕ ರಸ್ತೆ ಪಕ್ಕ ರಕ್ತಸಿಕ್ತರಾಗಿ ಬಿದ್ದಿದ್ದನು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಅದೇ ಮಾರ್ಗದಲ್ಲಿ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಗಮನಿಸಿ, ತಮ್ಮ ಕಾರನ್ನು ನಿಲ್ಲಿಸಿ, ಗಾಯಾಳುವಿನ ಆರೋಗ್ಯ ವಿಚಾರಿಸಿ, ನೀರು ನೀಡಲು ಹೇಳಿ ಉಪಚರಿಸಿ, ನಂತರ ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿದರು. ಬಳಿಕ ತಮ್ಮ ವಾಹನದಲ್ಲಿ ಶಿವಮೊಗ್ಗ ಕಡೆ ಪ್ರಯಾಣ ಬೆಳೆಸಿದ್ದಾರೆ.‌ ಗೃಹ ಸಚಿವರ ಈ ಮಾನವಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಅಲ್ಲಿದ್ದವರು ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದು, ಆಂಬ್ಯುಲೆನ್ಸ್​ ಅಪಘಾತವಾದ ಸ್ಥಳಕ್ಕೆ ಬರುವುದು ತಡವಾಗಿದೆ. ಹೀಗಾಗಿ ಆಂಬ್ಯಲೆನ್ಸ್​ ಬರುತ್ತಿದ್ದರೆ ಅದು ಸಿಕ್ಕಿದ್ದಲ್ಲಿ ಸ್ಥಳಾಂತರಿಸಬಹುದು ಎಂದು ಗಾಯಾಳು ಯುವಕನನ್ನು ತಮ್ಮ ಬೆಂಗಾವಲು ವಾಹನದಲ್ಲಿ ಕಳುಹಿಸಿದ್ದಾರೆ. ಗಾಯಾಳು ಮಾಹಿತಿಯನ್ನು ಪಡೆದು ಆತನ ಮನೆಯವರಿಗೆ ವಿಷಯ ತಿಳಿಸುವ ಕೆಲಸವನ್ನು ಗೃಹ ಸಚಿವರ ಜೊತೆಗೆ ಬಂದವರು ಮಾಡಿದ್ದಾರೆ.

ಇದನ್ನೂ ನೋಡಿ:ಮೋದಿ ಮ್ಯಾಜಿಕ್ ಈಶಾನ್ಯ, ಗುಜರಾತ್, ಯುಪಿ ಸೇರಿ ಕರ್ನಾಟಕದಲ್ಲೂ ಕೆಲಸ ಮಾಡುತ್ತಿದೆ: ಅಮಿತ್ ಶಾ

ABOUT THE AUTHOR

...view details