ಧಾರವಾಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ: ಸ್ಥಳೀಯರ ಮೊಬೈಲ್ನಲ್ಲಿ ದೃಶ್ಯ ಸೆರೆ.. WATCH VIDEO - ಧಾರವಾಡ
Published : Oct 6, 2023, 10:36 AM IST
|Updated : Oct 6, 2023, 10:52 AM IST
ಧಾರವಾಡ:ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಧಾರವಾಡದ ಜಕಣಿ ಬಾವಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಕುಡಿದ ಮತ್ತಿನಲ್ಲಿ ಯುವಕನ ತೀವ್ರ ಹಲ್ಲೆ ಮಾಡಲಾಗಿದೆ. ಅನೂಪ್ ಹಲ್ಲೆಗೊಳಗಾದ ಯುವಕ. ಹಲ್ಲೆಯ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬಾರ್‌ನಲ್ಲಿ ಪಾರ್ಟಿ ಮಾಡಿದ ಬಳಿಕ ಜಗಳವಾಗಿದೆ ಎಂದು ತಿಳಿದುಬಂದಿದೆ.
ನಗರ ಪೊಲೀಸ್ ಠಾಣೆಯಲ್ಲಿ 7 ಯುವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆದಾಗ ವಿಡಿಯೋ ಮಾಡಿಕೊಂಡಿದ್ದ ಸ್ಥಳೀಯರ ಸಹಾಯದಿಂದ ಪೊಲೀಸರು ಆರೋಪಿ ಯುವಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿಡಿಯೋದಲ್ಲಿ ಓರ್ವ ಯುವಕನಿಗೆ ಯುವಕರ ತಂಡ ಮನಬಂದಂತೆ ಥಳಿಸುವುದನ್ನು ಗಮನಿಸಬಹುದು. ಗುಂಪು ಸ್ವಲ್ಪ ದೊಡ್ಡದಾಗಿದ್ದರಿಂದ ತಕ್ಷಣಕ್ಕೆ ಯಾರೂ ಕೂಡ ಯುವಕನ ರಕ್ಷಣೆಗಾಗಿ ಧಾವಿಸಿಲ್ಲ. ಸಂತ್ರಸ್ತ ಯುವಕ ಕೂಗಿಕೊಂಡರೂ ಕರುಣೆಯಿಲ್ಲದಂತೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಯುವಕನಿಗೆ ಈ ರೀತಿ ತೀವ್ರ ಹಲ್ಲೆ ನಡೆಸಲು ಕಾರಣ ಏನೆಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
ಇದನ್ನೂ ಓದಿ :ಬೆಂಗಳೂರು: ರೌಡಿಶೀಟರ್ ಸಹಚರರಿಂದ ಸ್ನೇಹಿತರ ಮೇಲೆ ಹಲ್ಲೆ