ಸೋಜಿಗದ ಸೂಜಿ ಮಲ್ಲಿಗೆ, ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡು ಮಲ್ಲಿಗೆ: ಮುಸ್ಲಿಂ ಯುವತಿ ಹಾಡಿಗೆ ತಲೆಬಾಗಿದ ಜನ - ಸೋಜಿಗದ ಸೂಜಿ ಮಲ್ಲಿಗೆ
ಚಾಮರಾಜನಗರ: ಸೋಜಿಗದ ಸೂಜಿ ಮಲ್ಲಿಗೆ, ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡು ಮಲ್ಲಿಗೆ ಎಂದು ಮಾದಪ್ಪನ ಹಾಡನ್ನು ಹಾಡಿ ಮುಸ್ಲಿಂ ಯುವತಿ ಗಮನ ಸೆಳೆದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಉಮ್ಮೆ ಬಸೀರಾ ಹಾಡಿಗೆ, ವಿದ್ಯಾರ್ಥಿಗಳು ಚಪ್ಪಾಳೆ, ಸಿಳ್ಳೆಗಳ ಸುರಿಮಳೆ ಸುರಿಸಿದ್ದಾರೆ. ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ಮುಸ್ಲಿಂ ಯುವತಿಯ ಮಾದಪ್ಪನ ಹಾಡು ಎಲ್ಲರ ಗಮನ ಸೆಳೆಯಿತು.
Last Updated : Feb 3, 2023, 8:36 PM IST