ಟ್ರ್ಯಾಕ್ಟರ್ನಲ್ಲಿ ಸ್ಟಂಟ್: ಚಕ್ರದಡಿ ಸಿಲುಕಿ ಯುವಕ ಸಾವು - tractor overturned
Published : Jan 1, 2024, 2:06 PM IST
ಸಂಭಾಲ್(ಉತ್ತರ ಪ್ರದೇಶ):ಸಂಭಾಲ್ ನಗರದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಟ್ರ್ಯಾಕ್ಟರ್ನಲ್ಲಿ ಸ್ಟಂಟ್ ಮಾಡಲು ಹೋಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆಯಿತು. ಘಟನೆಯ ದೃಶ್ಯ ಮೊಬೈಲ್ ಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವಕನ ತಲೆ ಮೇಲೆಯೇ ಟ್ರ್ಯಾಕ್ಟರ್ ಚಕ್ರ ಬಿದ್ದು, ಸ್ಥಳದಲ್ಲಿಯೇ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ. ಮೃತನನ್ನು ಮೊಹಲ್ಲಾ ನಖಾಸಾ ನಿವಾಸಿ ಹಾಜಿ ಛಿದ್ದಾ ಎಂಬವರ ಪುತ್ರ 25 ವರ್ಷದ ಜಾಕೀರ್ ಎಂದು ಗುರುತಿಸಲಾಗಿದೆ.
ವಿಡಿಯೋದಲ್ಲಿ ಯುವಕ ರಸ್ತೆಮಧ್ಯೆ ಟ್ರ್ಯಾಕ್ಟರ್ ಅನ್ನು ವೇಗದಲ್ಲಿ ತಿರುಗಿಸುತ್ತಿರುವುದನ್ನು ನೋಡಬಹುದು. ಈ ವೇಳೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ರ್ಯಾಕ್ಟರ್ ಸಂಪೂರ್ಣ ಮಗುಚುವ ಮೊದಲೇ ಆತ ರಸ್ತೆಗೆ ಬಿದ್ದಿದ್ದಾನೆ. ಹೀಗಾಗಿ ಚಕ್ರದಡಿಯಲ್ಲಿ ಸಿಲುಕಿ ಸಾವನ್ನಪ್ಪಿರುವುದನ್ನು ಗಮನಿಸಬಹುದು. ತಕ್ಷಣವೇ ಅಲ್ಲಿದ್ದ ಸ್ಥಳೀಯರು ಟ್ರ್ಯಾಕ್ಟರ್ ಅನ್ನು ಮೇಲಕ್ಕೆತ್ತಿ ಜಾಕೀರ್ನನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು.
ಭಾನುವಾರ ಸಂಜೆ ತನ್ನ ಜಮೀನಿನಿಂದ ಟ್ರ್ಯಾಕ್ಟರ್‌ನೊಂದಿಗೆ ಮನೆಗೆ ಮರಳುತ್ತಿದ್ದು, ರಸ್ತೆ ಮಧ್ಯೆ ಸಾಹಸ ಮಾಡಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎಂದು ನಖಾಸಾ ಪೊಲೀಸ್ ಠಾಣೆ ಪ್ರಭಾರಿ ಗಜೇಂದ್ರ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ತೆಲಂಗಾಣ: 7 ವರ್ಷದ ಮಗಳನ್ನು ಬೆಂಕಿಗೆ ಎಸೆದ ತಂದೆ!