ಸಚಿವರಿಂದ ಕ್ಷೇತ್ರದ ಜನರಿಗೆ ಬಾಡೂಟ : ನೂಕು ನುಗ್ಗಲಿನಿಂದ ಮಹಿಳೆಯ ಕಾಲು ಮುರಿತ - ಈಟಿವಿ ಭಾರತ ಕನ್ನಡ
🎬 Watch Now: Feature Video
ಮೈಸೂರು: ಟಿ.ನರಸೀಪುರ ಕ್ಷೇತ್ರದಿಂದ ಗೆದ್ದ ಮತ್ತು ನೂತನ ಸಚಿವರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಚಿವ ಮಹಾದೇವಪ್ಪ ಸ್ವ ಕ್ಷೇತ್ರದ ಮತದಾರರಿಗೆ ಕೃತಘ್ನತಾ ಸಭೆ ಹಿನ್ನೆಲೆಯಲ್ಲಿ ಸಾವಿರಾರು ಮಂದಿಗೆ ಬಾಡೂಟ ಆಯೋಜನೆ ಮಾಡಿದ್ದರು. ಬಾಡೂಟದ ವೇಳೆ ತಳ್ಳಾಟ - ನೂಕಾಟ ಏರ್ಪಟ್ಟು, ಚಿಕ್ಕಮುತ್ತಮ್ಮ(66) ಎಂಬ ವೃದ್ದೆ ಕಾಲು ಮುರಿದುಕೊಂಡಿರುವ ಘಟನೆ ನಡದಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್ ಸಿ.ಮಹಾದೇವಪ್ಪ ಮೈಸೂರು ಜಿಲ್ಲೆಯಿಂದ ಸಚಿವರಾಗಿ ಆಯ್ಕೆಯಾಗಿರುವ ಮತ್ತು ಟಿ.ನರಸೀಪುರ ಕ್ಷೇತ್ರದಿಂದ ಗೆದ್ದ ಹಿನ್ನೆಲೆಯಲ್ಲಿ ತಮ್ಮ ಸ್ವ ಕ್ಷೇತ್ರ ಟಿ.ನರಸೀಪುರ ತಾಲೂಕಿನ ಹೆಳವರ ಹುಂಡಿ ಗ್ರಾಮದಲ್ಲಿ ಕೃತಘ್ನತಾ ಸಮಾರಂಭವನ್ನು ಏರ್ಪಾಟು ಮಾಡಿದ್ದರು. ಆ ಸಮಾರಂಭಕ್ಕೆ ಬರುವ ಸುಮಾರು 10 ಸಾವಿರ ಮಂದಿ ಕಾರ್ಯಕರ್ತರಿಗೆ ಬಾಡೂಟ ಸಹ ಆಯೋಜನೆ ಮಾಡಿದ್ದರು.
ಬಾಡೂಟದ ನೂಕುನುಗ್ಗಲಿನಲ್ಲಿ ಮಹಿಳೆ ಕಾಲು ಮುರಿತ :ಬಾಡೂಟದ ವೇಳೆ ಕಾರ್ಯಕರ್ತರ ನೂಕುನುಗ್ಗಲು ಉಂಟಾಗಿದೆ. ಅದರಲ್ಲಿ ಸಿಲುಕಿದ್ದ ಚಿಕ್ಕಮುತ್ತಮ್ಮ ಎಂಬುವವರು ಕಾಲ್ತುಳಿತಕ್ಕೆ ಒಳಗಾಗಿ ಬಲಗಾಲ ಮೂಳೆ ಮುರಿತವಾಗಿದೆ. ಕೂಡಲೇ ಆಂಬ್ಯುಲೆನ್ಸ್ಗೆ ಕರೆ ಮಾಡಿ ಟಿ.ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕೆ ಆರ್. ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ:ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ 1,500 ಪ್ರಯಾಣಿಕರು ಅತಂತ್ರ; ಊಟ, ಅಗತ್ಯ ಸೌಕರ್ಯ ಕಲ್ಪಿಸಿದ ಬಿಬಿಎಂಪಿ