ಕರ್ನಾಟಕ

karnataka

ಬೈಕ್​ಗೆ ಬೆಂಕಿ ಹಚ್ಚಿದ ಮಹಿಳೆ

ETV Bharat / videos

ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ತೆಗೆದು ಬೆಂಕಿ ಹಚ್ಚಿದ ಮಹಿಳೆ: ವಿಡಿಯೋ - ಅಪಾಯಕಾರಿ ಬೈಕ್​ ವ್ಹೀಲಿಂಗ್

By

Published : May 12, 2023, 11:11 AM IST

ನವದೆಹಲಿ : ನಿನ್ನೆ ರಾತ್ರಿ ದೆಹಲಿಯ ಜೈತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ತೆಗೆದು ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊದಲು ರಸ್ತೆ ಮೇಲೆ ನಡೆದುಕೊಂಡು ಬಂದ ಒಂಟಿ ಮಹಿಳೆಯು ಅಕ್ಕ ಪಕ್ಕ ಯಾರಾದರೂ ಇದ್ದಾರೆಯೇ ಎಂದು ಪರೀಕ್ಷಿಸಿ, ಬಳಿಕ ಬೈಕ್​ನಿಂದ ಪೆಟ್ರೋಲ್ ತೆಗೆದಿದ್ದಾರೆ. ಆ ನಂತರ ಬೆಂಕಿ ಹಚ್ಚಿದ್ದು, ಮತ್ತೊಂದು ಬೈಕ್‌ಗೂ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾಗ ಸ್ಥಳೀಯರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  

ಅಪಾಯಕಾರಿ ಬೈಕ್​ ವ್ಹೀಲಿಂಗ್: ಕಳೆದ ತಿಂಗಳು ಬೈಕ್‌ನಲ್ಲಿ ಓರ್ವ ಯುವತಿಯನ್ನು ಹಿಂಬದಿ ಸೀಟಿನಲ್ಲಿಯೂ ಮತ್ತೊಬ್ಬಳನ್ನು ಮುಂದೆ ಕೂರಿಸಿಕೊಂಡು ಯುವಕನೊಬ್ಬ ಅಪಾಯಕಾರಿ ವ್ಹೀಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಕುರಿತು ತನಿಖೆ ನಡೆಸಿದ ಮುಂಬೈನ ಬಿಕೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಫೈಯಾಜ್ ಖಾದ್ರಿ ಬಂಧಿತ ಆರೋಪಿ.  

ಇದನ್ನೂ ಓದಿ :ಇಬ್ಬರು ಯುವತಿಯರನ್ನು ಕೂರಿಸಿಕೊಂಡು ಅಪಾಯಕಾರಿ ಬೈಕ್‌ ಸ್ಟಂಟ್‌ , ಆರೋಪಿ ಸೆರೆ​ - ವಿಡಿಯೋ

ABOUT THE AUTHOR

...view details