ಕರ್ನಾಟಕ

karnataka

ಬೈಕ್​ನ ಚಕ್ರಕ್ಕೆ ಕಾಲು ಸಿಲುಕಿ ನರಳಾಡಿದ ಮಹಿಳೆ

ETV Bharat / videos

ಚಿಕ್ಕಮಗಳೂರು: ಬೈಕ್​ನ ಚಕ್ರಕ್ಕೆ ಕಾಲು ಸಿಲುಕಿ ನರಳಾಡಿದ ಮಹಿಳೆಯ ರಕ್ಷಣೆ - etv bharath kannada news

By

Published : Feb 8, 2023, 4:53 PM IST

Updated : Feb 14, 2023, 11:34 AM IST

ಚಿಕ್ಕಮಗಳೂರು :ಬೈಕಿನ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆಯ ಸೀರೆ‌ ಸೆರಗು ಚಕ್ರಕ್ಕೆ ಸಿಕ್ಕಿಕೊಂಡಿದ್ದರಿಂದ ಅವರ ಕಾಲು ಬೈಕಿನ ಚಕ್ರದೊಳಗೆ ಬಂಧಿಯಾಗಿತ್ತು. ಇದರಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ಮಹಿಳೆ ನರಳಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ. 

ತರೀಕೆರೆ ಪಟ್ಟಣದ ಸಮೀಪದ ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಎಂಬ ಮಹಿಳೆ ಬೈಕಿನಲ್ಲಿ ತರೀಕೆರೆ ಪಟ್ಟಣಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕಿನ ಹಿಂದೆ ಕುಳಿತಿದ್ದ ಮಹಿಳೆಯ ಸೀರೆ ಸೆರಗು ಹಾಗೂ ನೆರಿಗೆ ಬೈಕಿನ ಚಕ್ರಕ್ಕೆ ಸಿಲುಕಿ, ಕಾಲು ಚಕ್ರದೊಳಗೆ ಹೋಗಿತ್ತು. ಕೂಡಲೇ ಬೈಕ್ ಸವಾರ ಹಾಗೂ ಮಹಿಳೆ ಕೆಳಕ್ಕೆ ಬಿದ್ದಿದ್ದಾರೆ. ಮಹಿಳೆಯ ಕಾಲು ಗೇರ್ ಬಾಕ್ಸ್ ಮೂಲಕ ಚಕ್ರದ ಒಳಗೆ ಸಿಲುಕಿದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ನರಳಾಡಬೇಕಾಯಿತು. ಬಳಿಕ ಬೈಕ್​ನ ಚೈನ್ ಕಟ್ ಮಾಡಿ ಗೇರ್ ಬಾಕ್ಸ್ ಬಿಚ್ಚಿ ಮಹಿಳೆಯ ಕಾಲನ್ನು  ಹೊರ ತೆಗೆಯಲಾಯಿತು.  

ಓದಿ :  ಕೆರೆಯಲ್ಲಿ ಹುಲಿ ಕಳೇಬರ ಪತ್ತೆ: ಮೊದಲೇ ಸೆರೆ ಹಿಡಿಯದಿದ್ದಕ್ಕೆ ಜನರ ಆಕ್ರೋಶ

Last Updated : Feb 14, 2023, 11:34 AM IST

ABOUT THE AUTHOR

...view details