ತುಮಕೂರಿನಲ್ಲಿ ಭಾರಿ ಮಳೆ.. ಹಳ್ಳದಲ್ಲಿ ಟ್ರ್ಯಾಕ್ಟರ್ ಸಮೇತ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ - ಮಧುಗಿರಿ ತಾಲೂಕಿನಲ್ಲಿ ಭಾರಿ ಮಳೆ
ತುಮಕೂರಿನಲ್ಲಿ ಭಾರಿ ಮಳೆ ಆಗಿದೆ. ಮಧುಗಿರಿ ತಾಲೂಕಿನಲ್ಲಿ ಶನಿವಾರ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ಇಂದು ಬೆಳಗ್ಗೆ ಚಂದ್ರಗಿರಿ ಗ್ರಾಮದ ಬಳಿ ಹಳ್ಳ ಹರಿಯುತ್ತಿದ್ದ ವೇಳೆ ಟ್ರ್ಯಾಕ್ಟರ್ನೊಂದಿಗೆ ಹಳ್ಳ ದಾಟಲು ಯತ್ನಿಸಿದ ವೇಳೆ ಇಬ್ಬರು ಕೊಚ್ಚಿ ಹೋಗುತ್ತಿದ್ದ ವೇಳೆ ಅವರನ್ನು ರಕ್ಷಣೆ ಮಾಡಲಾಗಿದೆ. ಸ್ಥಳದಲ್ಲಿಯೇ ಇದ್ದ ಸಾರ್ವಜನಿಕರು ಇವರನ್ನು ಪಾರು ಮಾಡಿದ್ದಾರೆ. ಅಲ್ಲದೇ, ನೀರಿನಲ್ಲಿ ತೇಲಿ ಹೋಗುತ್ತಿದ್ದ ಟ್ರ್ಯಾಕ್ಟರ್ ಅನ್ನು ಹಗ್ಗದ ಸಹಾಯದಿಂದ ಕಟ್ಟಿ ಎಳೆದಿದ್ದಾರೆ.
Last Updated : Feb 3, 2023, 8:27 PM IST