ಕೈ ಮುಗಿದು ಅಂಗಡಿಗೆ ನುಗ್ಗಿದ ಕಳ್ಳ - 70 ಸಾವಿರ ಕದ್ದು ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಖದೀಮನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ
ಬೀದರ್: ಕೈ ಮುಗಿದು ಅಂಗಡಿಯ ಹಿಂಬದಿ ಕಿಟಕಿ ಮುರಿದು ಒಳ ನುಗ್ಗಿದ ಕಳ್ಳನೊಬ್ಬ ಕ್ಯಾಶ್ ಕೌಂಟರ್ನಲ್ಲಿದ್ದ 70 ಸಾವಿರಕ್ಕೂ ಅಧಿಕ ಹಣ ಕದ್ದು ಪರಾರಿಯಾದ ಘಟನೆ ಬೀದರ್ ನಗರದ ಅಂಬೇಡ್ಕರ್ ವೃತದ ಬಳಿ ಇರುವ ಜೋಧಪೂರ್ ಸ್ವೀಟ್ಸ್ ಶಾಪ್ನಲ್ಲಿ ನಡೆದಿದೆ. ಖದೀಮನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಮಾರ್ಕೆಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Feb 3, 2023, 8:36 PM IST