ಗೂಡಂಗಡಿಗೆ ನುಗ್ಗಿ ಸಿಗರೇಟ್, 30 ಸಾವಿರ ಹಣ ಕದ್ದ ಆರೋಪಿ ಸೆರೆ- ವಿಡಿಯೋ - ಚಾಲಕಿ ಸಯ್ಯದ್ ಬಾಬು ಕಳ್ಳ
ಕುಷ್ಟಗಿ (ಕೊಪ್ಪಳ):ಕುಷ್ಟಗಿ-ಇಲಕಲ್ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ವಣಗೇರಾ ಟೋಲ್ ಪ್ಲಾಜಾ ಬಳಿ, ಅಮರೇಶ ಗೋತಗಿ ಎಂಬವರ ಗೂಡಂಗಡಿಯಲ್ಲಿ 30 ಸಾವಿರ ರೂಪಾಯಿ ಕದ್ದ ಕಳ್ಳನನ್ನು ಸಿಸಿ ಟಿವಿ ದೃಶ್ಯದ ನೆರವಿನಿಂದ ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ. ಜ.4 ರಂದು ಪ್ರಕರಣ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜಿ.ಜಿ.ಹಳ್ಳಿಯ ಸಯ್ಯದ್ ಬಾಬು ಭಾಷು ಸಾಬ್ ಗಾರ್ಲ ಆರೋಪಿ. ಈತ ಕ್ಯಾಂಟರ್ ಲಾರಿ ಚಾಲಕ. ಎಳನೀರು ಲೋಡ್‌ನೊಂದಿಗೆ ಕುಷ್ಟಗಿ ವಣಗೇರಾ ಟೋಲ್ ಮೂಲಕ ಹೋಗುವಾಗ ಲಾರಿ ನಿಲ್ಲಿಸಿದ್ದಾನೆ. ಗ್ರಾಹಕನ ಸೋಗಿನಲ್ಲಿ ಟೋಲ್ ಹತ್ತಿರದ ಗೂಡಂಗಡಿ ಶೆಟರ್ ಗುದ್ದಿ ಸದ್ದು ಮಾಡಿದ್ದ. ಆಗ ಯಾರೂ ಇಲ್ಲದಿರುವುದು ಗಮನಿಸಿ, ಮೊಬೈಲ್ ಟಾರ್ಚ್ ಬೆಳಕಿನಲ್ಲಿ 30 ಸಾವಿರ ರೂ. ಹಾಗೂ 15 ಸಿಗರೇಟ್ ಪ್ಯಾಕ್ ಕಳವು ಮಾಡಿದ್ದಾನೆ.
ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರ ಮಾರ್ಗದರ್ಶನದ ಮೇರೆಗೆ ಪಿಎಸೈ ಮೌನೇಶ ರಾಠೋಡ್ ಚಾಲಕ, ಚಾಲಕಿ ಸಯ್ಯದ್ ಬಾಬು ಕಳ್ಳನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ:ಚಿತ್ರಮಂದಿರಕ್ಕೆ ಬೆಂಕಿ ಬಿದ್ದ ಸುಳ್ಳು ವದಂತಿ: ಥಿಯೇಟರ್‌ನಿಂದ ಹೊರ ಬಂದ ಪ್ರೇಕ್ಷಕರು