ಕರ್ನಾಟಕ

karnataka

ETV Bharat / videos

ಲಂಡನ್​ನಲ್ಲಿ ಎಂಎಸ್ ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶಿಸಿದ ವಿದ್ಯಾರ್ಥಿ.. ವಿಡಿಯೋ ವೈರಲ್​ - ಲಂಡನ್​ನಲ್ಲಿ ಕನ್ನಡ ಧ್ವಜ ಪ್ರದರ್ಶಿಸಿದ ವಿದ್ಯಾರ್ಥಿ

By

Published : Jan 22, 2023, 3:56 PM IST

Updated : Feb 3, 2023, 8:39 PM IST

ಲಂಡನ್​:ಬ್ರಿಟನ್‌ನ ಲಂಡನ್​ನಲ್ಲಿ ಕರ್ನಾಟಕದ ಮೂಲದ ವಿದ್ಯಾರ್ಥಿಯೋರ್ವ ತನ್ನ ಎಂಎಸ್ ಪದವಿ ಸ್ವೀಕಾರ ಸಮಾರಂಭದಲ್ಲಿ ಕನ್ನಡ ಧ್ವಜ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಸಿಟಿ ಯೂನಿವರ್ಸಿಟಿ ಆಫ್ ಲಂಡನ್​ನ ಬೇಯೆಸ್ ಬ್ಯುಸಿನೆಸ್ ಸ್ಕೂಲ್ (ಕ್ಯಾಸ್)ನ ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಅಧೀಶ್ ಆರ್. ವಾಲಿ ಎಂಬ ಯುವಕ ಎಂಎಸ್ ಪದವಿ ಪೂರೈಸಿದ್ದು, ಪದವಿ ಸ್ವೀಕರಿಸಲು ಬಂದಾಗ ತಮ್ಮ ಜೇಬಿನಲ್ಲಿದ್ದ ಕನ್ನಡ ಧ್ವಜವನ್ನು ತೆಗೆದು ಎಲ್ಲರ ಎದುರು ಪ್ರದರ್ಶಿಸಿದ್ದಾರೆ. 

ಈ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಅಧೀಶ್​ ಹಂಚಿಕೊಂಡಿದ್ದು, ಬ್ರಿಟನ್‌ನಲ್ಲಿ ನಡೆದ ಸಮಾರಂಭದಲ್ಲಿ ನಾನು ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದೊಂದಿಗೆ ಕರ್ನಾಟಕ, ಬೀದರ್​, ಕನ್ನಡ, ಕನ್ನಡಿಗ, ಲಂಡನ್​, ಯುಕೆ, ಇಂಗ್ಲೆಂಡ್​ ಮತ್ತು ಬೀದರ್​ಅಪ್​ಡೇಟ್ಸ್​ ಎಂಬ ಹ್ಯಾಷ್​​ ಟ್ಯಾಗ್​ಗಳನ್ನೂ ಅಧೀಶ್ ಬಳಕೆ ಮಾಡಿದ್ದಾರೆ. 

ಇದನ್ನೂ ಓದಿ:ಬಳ್ಳಾರಿಯಲ್ಲಿ 23 ಅಡಿ ಎತ್ತರದ ಡಾ.ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ

Last Updated : Feb 3, 2023, 8:39 PM IST

ABOUT THE AUTHOR

...view details