ಕರ್ನಾಟಕ

karnataka

ನಿವೃತ್ತಿ ಹೊಂದಿದ ಡಿಜಿಪಿಗೆ ರೋಪ್​ ಪುಲ್ಲಿಂಗ್​ ಗೌರವ ಸಲ್ಲಿಸಿದ ಐಪಿಎಸ್​ ಅಧಿಕಾರಿಗಳು

ETV Bharat / videos

ROPE PULLING HONOUR: ನಿವೃತ್ತಿ ಹೊಂದಿದ ಡಿಜಿಪಿಗೆ ರೋಪ್​ ಪುಲ್ಲಿಂಗ್​ ಗೌರವ ಸಲ್ಲಿಸಿದ ಐಪಿಎಸ್​ ಅಧಿಕಾರಿಗಳು

By

Published : Jul 1, 2023, 11:13 PM IST

Updated : Jul 2, 2023, 6:26 AM IST

ಚೆನ್ನೈ(ತಮಿಳುನಾಡು): ತಮಿಳುನಾಡು  ಕಾನೂನು ಮತ್ತು ಸುವ್ಯವಸ್ಥೆ ಡಿಜಿಪಿ ಸಿ.ಸೈಲೇಂದ್ರ ಬಾಬು ಅವರು ಜೂನ್​ 30ರಂದು ತಮ್ಮ ಸೇವೆಯಿಂದ ನಿವೃತ್ತಿ  ಹೊಂದಿದ್ದಾರೆ. ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈಲೇಂದ್ರ ಅವರನ್ನು ಕಾರಿಗೆ ಹಗ್ಗ ಕಟ್ಟಿ (honor of rope pulling) ಎಳೆದುಕೊಂಡು  ಬರುವ ಮೂಲಕ ಗೌರವ ಸಲ್ಲಿಸಲಾಯಿತು.

ಈ ವೇಳೆ ಹಾಲಿ  ಡಿಜಿಪಿ ಶಂಕರ್ ಜಿವಾಲ್, ಚೆನ್ನೈ ಪೊಲೀಸ್ ಕಮಿಷನರ್ ಸಂದೀಪ್ ರೈ ರಾಥೋಡ್ ಐಪಿಎಸ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳು ಕಾರನ್ನು ಹಗ್ಗ ಕಟ್ಟಿ (honor of rope pulling)ಎಳೆದುಕೊಂಡು ಡಿಜಿಪಿ ಕಚೇರಿವರೆಗೆ ಕರೆ ತಂದರು. ಈ ಕಾರಿನಲ್ಲಿ ನಿವೃತ್ತ ಡಿಜಿಪಿ ಸಿ.ಸೈಲೇಂದ್ರ ಬಾಬು ಮತ್ತು ಅವರ ಪತ್ನಿ ಕುಳಿತಿದ್ದರು.

ಹಗ್ಗದಿಂದ ಎಳೆಯುವ ಗೌರವ(honor of rope pulling) ಎಂದರೇನು ?: ಕಾನೂನು ಮತ್ತು ಸುವ್ಯವಸ್ಥೆಯ ಡಿಜಿಪಿ ಆಗುವುದು ಪ್ರತಿಯೊಬ್ಬ ಐಪಿಎಸ್ ಅಧಿಕಾರಿಯ ಕನಸಾಗಿದೆ. ಆದರೆ, ಎಲ್ಲರಿಗೂ ಕಾನೂನು ಸುವ್ಯವಸ್ಥೆ ಡಿಜಿಪಿ ಹುದ್ದೆ ಸಿಗುವುದು ಅಷ್ಟು ಸುಲಭವಲ್ಲ.  ಅಷ್ಟು ಸಾಮರ್ಥ್ಯ ಇರುವವರು  ಮಾತ್ರ  ಕಾನೂನು ಮತ್ತು ಸುವ್ಯವಸ್ಥೆ ಡಿಜಿಪಿ ಹುದ್ದೆಯನ್ನು  ಪಡೆಯುತ್ತಾರೆ. ಇಂತಹ ಉನ್ನತ  ಹುದ್ದೆಯಲ್ಲಿರುವ  ಅಧಿಕಾರಿಗಳು ನಿವೃತ್ತರಾದಾಗ ಅವರ ವಾಹನವನ್ನು ಹಗ್ಗದಿಂದ ಎಳೆಯುವ ಮೂಲಕ ಗೌರವ ನೀಡಲಾಗುತ್ತದೆ.

ಹಗ್ಗದಿಂದ ಎಳೆಯುವ ಗೌರವ ಎಂದರೆ ನಿವೃತ್ತ ಅಧಿಕಾರಿ ಮತ್ತು ಅವರ ಪತ್ನಿಯನ್ನು ಕಾರಿನಲ್ಲಿ ಕುಳ್ಳಿರಿಸಿ ಇತರ ಐಪಿಎಸ್ ಅಧಿಕಾರಿಗಳು ಅವರ ಕಾರನ್ನು  ಡಿಜಿಪಿ ಕಚೇರಿವರೆಗೆ ಹಗ್ಗದಿಂದ ಎಳೆದುಕೊಂಡು ಬರುತ್ತಾರೆ. ಇದು ಡಿಜಿಪಿ, ಎಡಿಜಿಪಿ, ಐಜಿ  ಮುಂತಾದ ಉನ್ನತ ಪೊಲೀಸ್ ಅಧಿಕಾರಿಗಳು ನಿವೃತ್ತಿ ಹೊಂದಿದಾಗ  ಗೌರವ ಸೂಚಿಸುವ ಕ್ರಮವಾಗಿದೆ. ಇನ್ನು ಅಧಿಕಾರಿಯು ಖಾಕಿ ಸಮವಸ್ತ್ರ ಧರಿಸಿ ಕಚೇರಿಗೆ ಬರುವ ಕೊನೆಯ ಕ್ಷಣವನ್ನು ನೆನಪಿಟ್ಟುಕೊಳ್ಳುವಂತೆ ಮಾಡುವುದೇ ಹಗ್ಗದಿಂದ ಕಾರು ಎಳೆದು ಗೌರವ ಸೂಚಿಸುವುದರ ಉದ್ದೇಶವಾಗಿದೆ.

ಇದನ್ನೂ ಓದಿ :ಬಿಹಾರ- ಗುಜರಾತ್​ನಲ್ಲಿ ಭಾರಿ ಮಳೆ: ನದಿಯಲ್ಲಿ ಮುಳುಗಿದ 2 ಟ್ರಕ್, ಮಧ್ಯದಲ್ಲಿ ಸಿಲುಕಿದ 28 ಲಾರಿಗಳು​

Last Updated : Jul 2, 2023, 6:26 AM IST

ABOUT THE AUTHOR

...view details