ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಸ್ಕಾರ್ಪಿಯೋ ಕಾರು - ವಿಡಿಯೋ - ಈಟಿವಿ ಭಾರತ ಕನ್ನಡ
ಅರುಣಾಚಲಪ್ರದೇಶ : ಈಶಾನ್ಯ ರಾಜ್ಯದಲ್ಲಿ ಉಂಟಾದ ದಿಢೀರ್ ಮೇಘಸ್ಫೋಟದಿಂದಾಗಿ, ಹಲವೆಡೆ ಭಾರೀ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಮೇಘಸ್ಪೋಟದಿಂದ ಉಂಟಾದ ಪ್ರವಾಹದಿಂದಾಗಿ ಇಲ್ಲಿನ ಸುಬಾನ್ಸಿರಿ ಜಿಲ್ಲೆಯ ಚಿಪುಟ ಗ್ರಾಮದಲ್ಲಿ ಸ್ಕಾರ್ಪಿಯೋ ವಾಹನವೊಂದು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ರಸ್ತೆಯಲ್ಲಿ ಹರಿಯುತ್ತಿದ್ದ ಪ್ರವಾಹದಲ್ಲಿ ಸಿಲುಕಿದ್ದ ಕಾರು ನೋಡು ನೋಡುತ್ತಿದ್ದಂತೆಯೇ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:28 PM IST