ಬಾರ ಎತ್ತುವ ಸ್ಪರ್ಧೆಯಲ್ಲಿ ಸಹಾಯಕನ ಕಾಲಿನ ಮೇಲೆ ಬಿದ್ದ ಬಂಡೆ
Published : Sep 7, 2023, 7:11 PM IST
|Updated : Sep 8, 2023, 12:22 PM IST
ವಿಜಯಪುರ :ಜಿಲ್ಲೆಯ ಬಸವನಬಾಗೇವಾಡಿಯ ಪಟ್ಟಣದಲ್ಲಿ ನಡೆದ ಬಸವೇಶ್ವರ ಜಾತ್ರೆಯಲ್ಲಿ ಆಯೋಜಿಸಲಾಗಿದ್ದ ಗುಂಡು ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಅವಘಡವೊಂದು ಗುರುವಾರ ಸಂಭವಿಸಿದೆ.
ಫೈಲ್ವಾನ್ ಚಂದ್ರಶೇಖರ ಯಾಳವಾರ ಎಂಬುವವರು ಕಲ್ಲು ಎತ್ತಿ ಕೆಳಗೆ ಇಳಿಸುವಾಗ ಅವರ ಸಹಾಯಕ ಸಾತಿದಾರ್ ಶಿವನಗೌಡ ಪಾಟೀಲ್ ಎದುರಿಗೆ ಬಂದಿದ್ದಾರೆ. ಆಗ ಚಂದ್ರಶೇಖರ್ ಕಲ್ಲು ಇಳಿಸುವಾಗ ಜಾರಿ ಸಹಾಯಕನ ಕಾಲಿನ ಮೇಲೆ ಬಿದ್ದಿದೆ.
ಕೈ ಜಾರಿ ಸಹಾಯಕನ ಕಾಲಿನ ಮೇಲೆ ಬಿದ್ದ ಗುಂಡು ಕಲ್ಲು:ಚಂದ್ರಶೇಖರ ಯಾಳವಾರ ಪ್ರತಿ ವರ್ಷ ಜಿಲ್ಲೆಯ ವಿವಿಧ ಜಾತ್ರೆಯಲ್ಲಿ ಗುಂಡು ಕಲ್ಲು ಎತ್ತಿ ಹಲವು ಪ್ರಶಸ್ತಿ, ಬಹುಮಾನ ಪಡೆದುಕೊಂಡಿದ್ದಾರೆ. ಇಂದು ಬಸವೇಶ್ವರ ಜಾತ್ರೆಯಲ್ಲಿ 175 ಕೆ. ಜಿ ತೂಕದ ಕಲ್ಲು ಎತ್ತಲು ಹೋದಾಗ ಕೈ ಜಾರಿ ಸಹಾಯಕ್ಕೆ ಬಂದವರ ಕಾಲಿನ ಮೇಲೆ ಬಿದ್ದಿದೆ. ಈ ದೃಶ್ಯ ವ್ಯಕ್ತಿಯೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದೆ.
ಚಿಕಿತ್ಸೆಗಾಗಿ ಮಿರಜ್ ಆಸ್ಪತ್ರೆಗೆ ದಾಖಲು :ಕಲ್ಲುಬಿದ್ದಿದ್ದರಿಂದ ಸಾತಿದಾರ್ ಶಿವನಗೌಡ ಎಂಬುವವರ ಕಾಲು ಮೂಳೆ ಮುರಿತವಾಗಿದೆ. ಚಿಕಿತ್ಸೆಗೆ ಅವರನ್ನು ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಲಿಗೆ ಎರಡು ರಾಡ್ ಅಳವಡಿಕೆ ಮಾಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂಬುದಾಗಿ ತಿಳಿದು ಬಂದಿದೆ.