ಕರ್ನಾಟಕ

karnataka

ETV Bharat / videos

ಕ್ಲಬ್​ ಚುನಾವಣೆಗೆ ಬಂದಿದ್ದ ಪೊಲೀಸ್​ ಅಧಿಕಾರಿಯ ಬೈಕ್​ ಎಗರಿಸಿದ ಖದೀಮರು - ಬೈಕ್​ ಕಳೆದುಕೊಂಡ ಪೊಲೀಸ್​ ಅಧಿಕಾರಿ

By

Published : Dec 25, 2022, 6:44 PM IST

Updated : Feb 3, 2023, 8:37 PM IST

ಲೂಧಿಯಾನ (ಪಂಜಾಬ್​): ಪೊಲೀಸ್​ ಅಧಿಕಾರಿಯ ಬೈಕ್ಅನ್ನೇ​ ಕಳ್ಳತನ ಮಾಡಿರುವ ಘಟನೆ ಪಂಜಾಬ್​ನ ಲೂಧಿಯಾನದಲ್ಲಿ ನಡೆದಿದೆ. ಇಲ್ಲಿನ ಸಟ್ಲೆಜ್ ಕ್ಲಬ್‌ನ ಚುನಾವಣಾ ಕರ್ತವ್ಯಕ್ಕಾಗಿ ಎಎಸ್‌ಐ ಗುರುದೇವ್ ಸಿಂಗ್ ನಿಯೋಜನೆಗೊಂಡಿದ್ದರು. ತಮ್ಮ ಬೈಕ್​ನಲ್ಲಿ ಬಂದಿದ್ದ ಗುರುದೇವ್ ಹೊರಗಡೆ ಬೈಕ್​ ನಿಲ್ಲಿಸಿ ಹೋಗಿದ್ದರು. ಆದರೆ, ಕರ್ತವ್ಯ ನಿರ್ವಹಿಸಿ ಹೊರ ಬಂದು ನೋಡುವಷ್ಟರಲ್ಲಿ ಬೈಕ್​ ಮಾಯವಾಗಿತ್ತು. ಬೈಕ್‌ಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ಇದರಿಂದ ಬೈಕ್​ ಕಳ್ಳತನದ ಬಗ್ಗೆ ಎಎಸ್​ಐ ತಮ್ಮದೇ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated : Feb 3, 2023, 8:37 PM IST

ABOUT THE AUTHOR

...view details