ತುಮಕೂರಿನಲ್ಲಿ ಮಾನಸಿಕ ಅಸ್ವಸ್ಥನಿಂದ ಹಲ್ಲೆ; ವ್ಯಕ್ತಿ ಸಾವು - ಕೊರಟಗೆರೆ ಪೊಲೀಸ್ ಠಾಣೆ
Published : Oct 17, 2023, 7:07 PM IST
ತುಮಕೂರು:ಮಾನಸಿಕ ಅಸ್ವಸ್ಥನಿಂದ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿರವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಅನಿಲ್ ಎಂಬಾತ ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದು, ಈತ ಶಿವಶಂಕರಪ್ಪ ಎಂಬುವರಿಗೆ ದೊಣ್ಣೆಯಿಂದ ಥಳಿಸಿದ್ದ. ಪರಿಣಾಮ ಶಿವಶಂಕರಪ್ಪ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾನಸಿಕ ಅಸ್ವಸ್ಥ ಅನಿಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರು ವರ್ಷದ ಹಿಂದೆ ಸ್ವಂತ ತಂದೆಯನ್ನೇ ಹತ್ಯೆ ಮಾಡಿದ್ದ ಅನಿಲ್:ಮಾನಸಿಕ ಅಸ್ವಸ್ಥನಾಗಿರುವ ಅನಿಲ್ ಇಂದ ಆಗಿರುವುದು ಇದು ಮೊದಲನೆಯ ಕೊಲೆಯಲ್ಲ. ಇದಕ್ಕೂ ಮೊದಲು 6ವರ್ಷದ ಹಿಂದೆಯೇ ತನ್ನ ಸ್ವಂತ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿಕೊಲೆ ಮಾಡಿದ್ದನು. ಈ ಹಿನ್ನೆಲೆ ಅನಿಲ್ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದನು. ಆದರೆ, ಇದರ ಬಳಿಕ ಆತನ ಮಾನಸಿಕ ಅಸ್ವಸ್ಥನಾಗಿದ್ದು, ಕೊರಟಗೆರೆಯಲ್ಲಿ ಅಲೆದಾಡುತ್ತಿದ್ದನು.
ಹೀಗೆ ಇದ್ದ ಅನಿಲ್ ಯಾಕೋ ನಿನ್ನೆ ರಾತ್ರಿ ಶನಿಮಹಾತ್ಮ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ಶಿವಶಂಕರಪ್ಪ ಎಂಬಾತನ ತಲೆಗೆ ಹಿಂದಿನಿಂದ ಬಂದು ದೊಣ್ಣೆಯಿಂದ ಬಲವಾಗಿ ಹೊಡೆದಿದ್ದನು. ಹೊಡೆತದ ರಭಸಕ್ಕೆ ಶಿವಶಂಕರಪ್ಪ ಸಾವನ್ನಪ್ಪಿದ್ದಾರೆ. ಸದ್ಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಂಗಳೂರು: ಅನೈತಿಕ ಸಂಬಂಧ, ವ್ಯಕ್ತಿ ಹತ್ಯೆಗೈದ ದಂಪತಿ ಬಂಧನ