ಕುಡಿದು ಟೈಟ್: ಬೈಕ್ ಓಡಿಸಲಾಗದೇ ನಡು ರಸ್ತೆಯಲ್ಲೇ ಮಲಗಿದ ಭೂಪ - ವಿಡಿಯೋ - ಬೈಕ್ ಓಡಿಸಲಾಗದೆ ನಡು ರಸ್ತೆಯಲ್ಲೇ ಮಲಗಿದ ಭೂಪ
Published : Oct 10, 2023, 7:42 AM IST
|Updated : Oct 10, 2023, 12:34 PM IST
ಚಿಕ್ಕಮಗಳೂರು:ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲಾಗದೇ ವ್ಯಕ್ತಿಯೊಬ್ಬ ರಾತ್ರೋ ರಾತ್ರಿ ರಸ್ತೆ ಮಧ್ಯೆಯೆ ಮಲಗಿ ನಿದ್ರೆಗೆ ಜಾರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಬೈಕ್‌ನ ಇಂಡಿಕೇಟರ್ ಆನ್ ಇದ್ದಿದ್ದರಿಂದ ಯಾವುದೇ ವಾಹನ ಆತನ ಮೇಲೆ ಹರಿಯದೇ ಆತನ ಪ್ರಾಣ ಉಳಿದಿದೆ. ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಬೈಕ್ ಸವಾರ ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲಾಗದೇ ಸೀದಾ ರಸ್ತೆ ಮಧ್ಯೆ ಮಲಗಿದ್ದ.
ಅದೇ ರಸ್ತೆ ಮೂಲಕ ಬಂದಿದ್ದ ಇತರ ಪ್ರಯಾಣಿಕರು ರೋಡ್ ಮಧ್ಯೆ ಬೈಕ್ ಇಂಡಿಕೇಟರ್ ಆನ್ ಇದ್ದು, ಸವಾರ ರಸ್ತೆಯಲ್ಲಿ ಇರುವುದನ್ನು ನೋಡಿ ಅಪಘಾತವಾಗಿರುವುದೆಂದು ಭಾವಿಸಿದ್ದಾರೆ. ಕೂಡಲೇ ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆ್ಯಂಬುಲೆನ್ಸ್ ಬರುತ್ತಿದ್ದಂತೆ ಬೈಕ್ ಸವಾರ ಸೈರನ್ ಸದ್ದು ಕೇಳಿ ಎದ್ದು ಕುಳಿತಿದ್ದಾನೆ. ಗಾಬರಿಗೊಂಡ ಇತರ ಸವಾರರು ವ್ಯಕ್ತಿಯ ಬೈಕ್‌ನ ಇಂಡಿಕೇಟರ್ ಆನ್ ಇದ್ದುದರಿಂದ ಆತ ಬದುಕುಳಿದಿದ್ದಾನೆ ಎಂದು ಈ ಟಿವಿ ಭಾರತ್ಗೆ ತಿಳಿಸಿದ್ದಾರೆ. ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಬೈಕ್ ಸವಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ವೇಗವಾಗಿ ಚಲಿಸುತ್ತಿದ್ದ ಬೈಕ್ನಿಂದ ಕೆಳಗೆ ಬಿದ್ದ ಸವಾರ: ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಾಯ..