ಕರ್ನಾಟಕ

karnataka

ವೃದ್ಧಾಶ್ರಮದ 80 ಮಂದಿ ವೃದ್ಧರನ್ನು ಧಾರ್ಮಿಕ ಪ್ರವಾಸಕ್ಕೆ ಕರೆದೊಯ್ದ ಮುಸ್ಲಿಂ ಯುವಕ: ವಿಡಿಯೋ

ETV Bharat / videos

ವೃದ್ಧಾಶ್ರಮದ 80 ವೃದ್ಧರನ್ನು ಧಾರ್ಮಿಕ ಪ್ರವಾಸಕ್ಕೆ ಕರೆದೊಯ್ದ ಮುಸ್ಲಿಂ ಯುವಕ: ವಿಡಿಯೋ - ಈಟಿವಿ ಭಾರತ ಕರ್ನಾಟಕ

By ETV Bharat Karnataka Team

Published : Nov 13, 2023, 5:40 PM IST

ಜುನಾಗಢ (ಗುಜರಾತ್​): ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ವಿಶೇಷ ಸ್ಥಾನಮಾನವಿದ್ದು, ವರ್ಷದ ಕೊನೆಯ ಹಬ್ಬವನ್ನು ಜನರು ಭಕ್ತಿ ಪೂರ್ವಕವಾಗಿ ಆಚರಣೆ ಮಾಡುತ್ತಾರೆ. ಇಂತಹ ಪವಿತ್ರವಾದ ದಿನದಂದು ಗುಜರಾತ್‌ನ ಜುನಾಗಢ್‌ನಲ್ಲಿ 5 ವೃದ್ಧಾಶ್ರಮಗಳಲ್ಲಿರುವ 80 ವೃದ್ಧರಿಗೆ ರಿಯಾಜ್ ರಂಗುನುನ್‌ವಾಲಾ ಎಂಬ ಮುಸ್ಲಿಂ ಯುವಕನೊಬ್ಬ ಬೆಳಕಿನ ಮೆರಗು ತಂದಿದ್ದಾರೆ. ದೀಪಾವಳಿಯಂದು ತನ್ನ ಸ್ನೇಹಿತರ ಸಹಾಯದಿಂದ 80 ವೃದ್ಧರನ್ನು ಧಾರ್ಮಿಕ ಪ್ರವಾಸಿ ಸ್ಥಳಗಳಿಗೆ ಕರೆದ್ಯೊಯುವ ಮೂಲಕ ಹಿಂದೂ - ಮುಸ್ಲಿಂ ಸೌಹಾರ್ದತೆ ಸಾರಿದ್ದಾರೆ.

ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಸಂಘರ್ಷಗಳು ಏರ್ಪಡುತ್ತವೆ  ಆದರೆ, ಇಲ್ಲಿ ನಡೆದಿರುವ ಈ ಒಂದು ಘಟನೆ ಕೋಮು ಸೌಹಾರ್ದತೆಗೆ ಉದಾಹರಣೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎರಡು ವರ್ಷಗಳ ಹಿಂದೆ ಎದುರಾದ ಕೊರೊನಾ ಅವಧಿಯನ್ನು ಹೊರತುಪಡಿಸಿದರೆ, ಸತತವಾಗಿ ಕಳೆದ 6 ವರ್ಷಗಳಿಂದ ರಿಯಾಜ್ ಅವರು ವೃದ್ಧಾಶ್ರಮಗಳಲ್ಲಿ ಇರುವ ವೃದ್ಧರನ್ನು ದೇವಸ್ಥಾನಗಳಿಗೆ ಕರೆದೊಯ್ಯುವ ಮೂಲಕ ದೀಪಾವಳಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಕೊರೊನಾ ಅವಧಿಯಲ್ಲಿ ವಯಸ್ಸಾದವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ದೀಪಾವಳಿಯಂದು ಹೀಗೆ ಆಚೆ ಎಲ್ಲೂ ಹೋಗಲು ಸಾಧ್ಯವಾಗಲಿಲ್ಲ. ಕೋವಿಡ್ ಕಡಿಮೆಯಾದ ನಂತರ, ನಾವು ಮತ್ತೆ ಜುನಾಗಢ್ ಮತ್ತು ಸುತ್ತಮುತ್ತಲಿನ ಧಾರ್ಮಿಕ ಪ್ರವಾಸಗಳಿಗೆ ವೃದ್ಧರನ್ನು ಕರೆದೊಯ್ಯಲು ಪ್ರಾರಂಭಿಸಿದ್ದೇವೆ ಎಂದು ರಿಯಾಜ್ ರಂಗುನುನ್‌ವಾಲಾ ಹೇಳಿದ್ದಾರೆ.

ಇದನ್ನೂ ಓದಿ:ಅಮೃತಸರದ ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹಿಬ್​ನಲ್ಲಿ 'ಬಂದಿ ಚೋರ್​ ದಿವಸ್'​ ಸಂಭ್ರಮ

ABOUT THE AUTHOR

...view details