ಕರ್ನಾಟಕ

karnataka

ಹೊತ್ತಿ ಉರಿದ ಕಾರು

ETV Bharat / videos

ದಿಢೀರ್ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು, ಪ್ರಾಣಾಪಾಯದಿಂದ ವಕೀಲರ ಕುಟುಂಬ ಪಾರು - ಇಂಜಿನ್​ನಲ್ಲಿ ಬೆಂಕಿ

By ETV Bharat Karnataka Team

Published : Dec 20, 2023, 10:28 PM IST

ಯಲಹಂಕ:ಚಲಿಸುತ್ತಿದ್ದ ಕಾರು ಇದ್ದಕ್ಕಿದ್ದಂತೆ ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದ ವಕೀಲರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಯಲಹಂಕ ತಾಲೂಕು ಮಾರಸಂದ್ರ ಬಳಿಯ ಅಪಾರ್ಟ್​ಮೆಂಟ್ ಮುಂಭಾಗದಲ್ಲಿ ಇಂದು ರಾತ್ರಿ 7 ಗಂಟೆ ಸಮಯದಲ್ಲಿ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. 

ಗೌರಿಬಿದನೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರು ಹೊತ್ತಿ ಉರಿಯಿತು. ಕಾರಿನ ಮೇಲೆ ಲಾಯರ್ ಚಿಹ್ನೆ ಇದ್ದು, ವಕೀಲರ ಕುಟುಂಬ ಕಾರಿನಲ್ಲಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.

ಬೆಂಕಿ ಹೊತ್ತಿಕೊಂಡ ಕೂಡಲೇ ಕಾರಿನಲ್ಲಿದ್ದವರು ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. 

ಕಾರಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆ ನಂತರ ಯಲಹಂಕ-ಹಿಂದೂಪುರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ರಾಜಾನುಕುಂಟೆ ಪೊಲೀಸರು ಅನುವು ಮಾಡಿಕೊಟ್ಟರು.

ಇದನ್ನೂ ಓದಿ:ನೆಲಮಂಗಲ: ಹೊತ್ತಿ ಉರಿದ ಕಾರು, 50 ಸಾವಿರ ರೂಪಾಯಿ ನಗದು ಭಸ್ಮ

ABOUT THE AUTHOR

...view details