ಮಕ್ಕಳ ಜತೆ ಆಟ, ನಾಯಿ ಜತೆ ಚಿನ್ನಾಟ; ಗ್ರಾಮಸ್ಥರ ಪ್ರೀತಿಗೆ ಪಾತ್ರವಾದ ಹನುಮ- ವಿಡಿಯೋ - Beliganodu village
Published : Dec 31, 2023, 6:04 PM IST
ದಾವಣಗೆರೆ: ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದಲ್ಲಿ ಮುಸಿಯಾವೊಂದು ಮಕ್ಕಳ ಜತೆ ಮಕ್ಕಳಂತೆ ಆಟವಾಡುತ್ತ, ನಾಯಿ ಜೊತೆ ಚಿನ್ನಾಟ ಆಡುತ್ತಾ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಕಳೆದ ಏಳೆಂಟು ತಿಂಗಳಿನಿಂದ ಗ್ರಾಮದಲ್ಲೇ ಬೀಡುಬಿಟ್ಟಿರುವ ಮುಸಿಯಾ ಗ್ರಾಮಸ್ಥರ ಪ್ರೀತಿಗೆ ಪಾತ್ರವಾಗಿದೆ. ಎಲ್ಲರ ಜತೆಗೆ ಬೆರೆಯುವ ಈ ಮುಸಿಯಾನಿಗೆ ಗ್ರಾಮಸ್ಥರು ಪ್ರೀತಿಯಿಂದ ಹನುಮ ಎಂದು ಹೆಸರಿಟ್ಟಿದ್ದಾರೆ.
ಹನುಮ ಮಕ್ಕಳ ಗುಂಪಿನಲ್ಲಿ ತಾನೂ ಒಬ್ಬ ಸದಸ್ಯ ಎಂಬಂತೆ ಇದ್ದು, ಅವರ ಜೊತೆ ತುಂಟಾಟ ಆಡುತ್ತದೆ. ಮಕ್ಕಳು ಕೂಡಾ ಅದನ್ನು ತಮ್ಮದೇ ಗುಂಪಿನ ಸದಸ್ಯ ಎಂಬಂತೆ ಭಾವಿಸಿದ್ದಾರೆ. ಮಕ್ಕಳು ಆಟವಾಡುತ್ತಿದ್ದರೆ ಅದು ಓಡಿ ಬಂದು ಹೆಗಲೇರಿ ಕುಳಿತುಕೊಳ್ಳುತ್ತದೆ. ಯುವಕನೊಬ್ಬ ಮೊಬೈಲ್ ವೀಕ್ಷಿಸುತ್ತಿದ್ದರೆ, ಹನುಮನೂ ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ತನಗೂ ತೋರಿಸು ಎಂದು ಹಠ ಮಾಡುತ್ತದೆ. ಇಷ್ಟೇ ಅಲ್ಲ, ನಾಯಿಮರಿ ಜತೆಗೂ ಪ್ರೀತಿಯಿಂದ ಬೆರೆತು ಚಿನ್ನಾಟವಾಡುತ್ತದೆ. ಗ್ರಾಮದ ಮನೆ, ಅಂಗಡಿ ಮುಂದೆ ಹೋಗಿ ಎಲ್ಲರ ಜತೆಗೆ ಬೆರೆಯುತ್ತದೆ. ಹೀಗಾಗಿ ಹನುಮನನ್ನು ಕಂಡರೆ ಇಡೀ ಗ್ರಾಮದ ಜನರಿಗೆ ಎಲ್ಲಿಲ್ಲದ ಪ್ರೀತಿ. ಮನುಷ್ಯ ಮತ್ತು ಮುಸಿಯಾನ ನಡುವಿನ ಈ ಪ್ರೀತಿ, ಬಾಂಧವ್ಯ ಅಚ್ಚರಿಯನ್ನು ಉಂಟುಮಾಡಿದೆ.
ಇದನ್ನೂ ಓದಿ:ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ 70 ಕೆ.ಜಿ ತೂಕದ ಚಿರತೆ ಸೆರೆ: ವಿಡಿಯೋ