ಕೋತಿ ಮರಿಗೂ ಫೋನ್ ಗೀಳು.. ಮೊಬೈಲ್ಗಾಗಿ ಹಾತೊರೆಯುವ ಪರಿ ನೋಡಿ - Etv bharat kannada
ಹೈದರಾಬಾದ್: ಕಳೆದ ಕೆಲವು ದಿನಗಳಿಂದ ಕೋತಿಗಳ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೋತಿ ಮರಿ ಮೊಬೈಲ್ಗಾಗಿ ಹಾತೊರೆಯುವುದನ್ನು ಕಾಣಬಹುದು. ವ್ಯಕ್ತಿಯೊಬ್ಬರು ಅವುಗಳಿಗೆ ಏನೋ ಆಹಾರ ನೀಡಿ ವಿಡಿಯೋ ಮಾಡಲು ಮುಂದಾಗಿದ್ದಾರೆ. ಆದ್ರೆ ಆಹಾರದ ಕಡೆ ನೋಡದೆ ಮಂಗದ ಮರಿ ಆ ಮೊಬೈಲ್ನ್ನೇ ಕಿತ್ತುಕೊಳ್ಳಲು ಯತ್ನಿಸಿದೆ. ಈಗ ಮೊಬೈಲ್ ಗೀಳು ಅಂಟಿಸಿಕೊಂಡವರಿಗೆ ಈ ವಿಡಿಯೋದಲ್ಲಿನ ದೃಶ್ಯವನ್ನು ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಯುವ ಸಮೂಹ ಸಹ ಇದೇ ರೀತಿ ಮೊಬೈಲ್ ಚಟಕ್ಕೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇದನ್ನು ತಮಾಷೆಯ ದೃಶ್ಯವೆಂದು ಪರಿಗಣಿಸಿದ್ದಾರೆ.
Last Updated : Feb 3, 2023, 8:26 PM IST