ಬೆಣ್ಣೆ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿ, ಇನ್ನೋರ್ವ ಬಚಾವ್.. ವಿಡಿಯೋ - man wash away in rain water
ಧಾರವಾಡ: ಬೆಣ್ಣೆ ಹಳ್ಳದಲ್ಲಿ ಬೈಕ್ ಸಮೇತ ಓರ್ವ ಕೊಚ್ಚಿ ಹೋಗಿದ್ದಾನೆ. ಮತ್ತೋರ್ವ ಅಪಾಯದಿಂದ ಪಾರಾಗಿರುವ ಘಟನೆ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ. ನರಗುಂದಕ್ಕೆ ಹೊರಟ್ಟಿದ್ದ ವೇಳೆ ತಡಹಾಳ ಗ್ರಾಮದ ಹೊರ ವಲಯದಲ್ಲಿರುವ ಬೆಣ್ಣೆ ಹಳ್ಳ ದಾಟುವ ವೇಳೆ ಈ ಘಟನೆ ಸಂಭವಿಸಿದೆ. ತಡಹಾಳ ಗ್ರಾಮದ ಸದಾನಂದ ಪೂಜಾರ(35) ಕೊಚ್ಚಿ ಹೊದ ವ್ಯಕ್ತಿ. ಶರಣಯ್ಯ ಹಿರೇಮಠ ವ್ಯಕ್ತಿ ಪಾರಾದವರು. ರಕ್ಷಣೆ ಮಾಡುತ್ತಿದ್ದ ಗ್ರಾಮಸ್ಥರ ಕಣ್ಣೆದುರೇ ಸದಾನಂದ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಆಗಮಿಸಿ ರಕ್ಷಣಾ ಕಾರ್ಯ ಮುಂದುವರೆಸಿದೆ. ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Last Updated : Feb 3, 2023, 8:27 PM IST