ಬೇಕರಿ ಗ್ರಾಹಕರ ಮೇಲೆ ಡ್ಯಾಗರ್ ಹಿಡಿದು ದರ್ಪ, ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಬೆಂಗಳೂರು ವೈರಲ್ ವಿಡಿಯೋ
Published : Sep 11, 2023, 6:54 PM IST
ಬೆಂಗಳೂರು: ಬೆಂಗಳೂರಿನಲ್ಲಿ ಮಾರಕಾಸ್ತ್ರ ಹಿಡಿದು ಪುಂಡಾಟವಾಡುವವರ ಹಾವಳಿ ಮುಂದುವರೆದಿದೆ. ಪಕ್ಕದ ಅಂಗಡಿಯ ಗ್ರಾಹಕರ ಮೇಲೆ ಇದ್ದಕ್ಕಿದ್ದಂತೆ ಡ್ಯಾಗರ್ ಹಿಡಿದು ಹಲ್ಲೆಗೆ ಮುಂದಾದ ಆಸಾಮಿಯೊಬ್ಬ ತಾನೇ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಭಾನುವಾರ ಸಂಜೆ ನಾಗರಭಾವಿ ವಿಲೇಜ್ನಲ್ಲಿ ನಡೆದಿದೆ. ನಂದಿನಿ ಬೂತ್ ಮಾಲೀಕ ಕುರುಡಸ್ವಾಮಿ ಡ್ಯಾಗರ್ ಹಿಡಿದು ಹಲ್ಲೆಗೆ ಯತ್ನಿಸಿ ಆಸ್ಪತ್ರೆ ಪಾಲಾದ ಆರೋಪಿ.
ನಂದಿನಿ ಬೂತ್ ಪಕ್ಕದಲ್ಲಿರುವ ಬೇಕರಿ ಬಳಿ ನಿಂತಿದ್ದ ಗ್ರಾಹಕರೊಂದಿಗೆ ತಾನೇ ಕಿರಿಕ್ ಆರಂಭಿಸಿದ್ದ ಕುರುಡಸ್ವಾಮಿ ಏಕಾಏಕಿ ಡ್ಯಾಗರ್ ನಿಂದ ಇರಿಯಲು ಯತ್ನಿಸಿದ್ದಾನೆ. ಈ ವೇಳೆ, ತಪ್ಪಿಸಿಕೊಳ್ಳವ ಭರದಲ್ಲಿ ನಡೆದ ತಳ್ಳಾಟದಲ್ಲಿ ಕುರುಡಸ್ವಾಮಿಯ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಬಗ್ಗೆ ಚಂದ್ರಾ ಲೇಔಟ್ ಪೊಲೀಸರು ಮಾಹಿತಿ ಪಡೆದಿದ್ದು, ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಡ್ಯಾಗರ್ ಹಿಡಿದು ಹಲ್ಲೆ ನಡೆಸಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಟಿವಿ ಭಾರತ್ಗೆ ಲಭ್ಯವಾಗಿದೆ. ದೃಶ್ಯದಲ್ಲಿ ಬೇಕರಿಗೆ ಬಂದ ಗ್ರಾಹಕರ ಬಳಿ ಡ್ಯಾಗರ್ ಹಿಡಿದು ಕುರುಡುಸ್ವಾಮಿ ಪುಂಡಾಟ ಮೆರೆದಿದ್ದಾನೆ. ಬಳಿಕ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಗುಂಪುಗಳ ನಡುಚೆ ತಳ್ಳಾಟ ಏರ್ಪಟ್ಟಿರುವುದ ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ:Watch... ಮದ್ಯದಂಗಡಿಗೆ ಲಗ್ಗೆ ಇಟ್ಟ ಗಜರಾಜನ ಪಡೆ.. ಮದ್ಯಪ್ರಿಯರು ಚೆಲ್ಲಾಪಿಲ್ಲಿ