ಕೊಪ್ಪಳದಲ್ಲಿ ಕರ್ತವ್ಯ ನಿರತ ಪಿಡಿಒ ಮೇಲೆ ಹಲ್ಲೆ.. ಪ್ರಕರಣ ದಾಖಲು - ಅಧಿಕಾರಿಗೆ ಕಪಾಳಮೊಕ್ಷ ಮಾಡಿದ ಘಟನೆ
Published : Oct 14, 2023, 9:27 AM IST
ಕೊಪ್ಪಳ: ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗೆ ಕಪಾಳಮೊಕ್ಷ ಮಾಡಿದ ಘಟನೆ ಶುಕ್ರವಾರ ನಡೆದಿದೆ. ಮರಿಸ್ವಾಮಿ ಎಂಬುವವರು ತಮ್ಮ ಆಸ್ತಿಗೆ ಸಂಬಂಧಿಸಿದ 9/11 ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. 9/11 ನೀಡಲು ವಿಳಂಬ ಮಾಡಿದ ಹಿನ್ನೆಲೆ ಪಿಡಿಒ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಲ್ಲೆಯ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿದೆ.
ದಾಖಲೆ ಪರಿಶೀಲನೆ ಮಾಡಿ ಕೊಡುವುದಾಗಿ ತಿಳಿಸಿದ್ದೆ, ಆದರೂ ಸಹಿತ ಕರ್ತವ್ಯ ನಿರತ ನನ್ನ ಮೇಲೆ ಮರಿಸ್ವಾಮಿ ಹಲ್ಲೆ ಮಾಡಿದ್ದಾನೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಬೇವೂರು ಪೊಲೀಸ್ ಠಾಣೆಯಲ್ಲಿ ಪಿಡಿಒ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕು.
ಯುವತಿ ಮೇಲೆ ಹಲ್ಲೆ: ಅಕ್ಟೋಬರ್ 8ರಂದು ಯುವಕ ಹಾಗೂ ಯುವತಿ ಇಬ್ಬರೂ ಸೇರಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿದ್ದರು. ಈ ವೇಳೆ, ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿದ್ದು, ಆರೋಪಿ ಯುವಕ ಕಟರ್ನಿಂದ ಯುವತಿಗೆ ಇರಿದು ಹಲ್ಲೆಗೊಳಿಸಿದ್ದನು. ಸದ್ಯ ಆರೋಪಿ ಇಮಾಮ್ ಜಾಫರ್ ಶೇಖ್ ಬಂಧಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ಓದಿ:ಹಾಸನ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ, ಮೊಬೈಲ್, ನಗದು ದೋಚಿ ದುಷ್ಕರ್ಮಿ ಪರಾರಿ