ಕರ್ನಾಟಕ

karnataka

By

Published : Aug 3, 2022, 4:01 PM IST

Updated : Feb 3, 2023, 8:25 PM IST

ETV Bharat / videos

ಬೆಳಗಾವಿಯಲ್ಲಿ ಅಕ್ಕ-ತಮ್ಮನ ಮೇಲೆ ಹರಿದ ಲಾರಿ: ಬಾಲಕ ಸ್ಥಳದಲ್ಲೇ ಸಾವು video

ಬೆಳಗಾವಿ : ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಅಕ್ಕ ತಮ್ಮನ ಮೇಲೆ ಲಾರಿಯೊಂದು ಹರಿದಿದೆ. ಈ ಅಪಘಾತದಲ್ಲಿ ಬಾಲಕ ಸಾವಿಗೀಡಾಗಿದ್ದು, ಅಪಘಾತದ ಭೀಕರ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ದಾಟಲು ಸ್ಕೂಟರ್ ಮೇಲಿದ್ದ ಅಕ್ಕ-ತಮ್ಮನ ಮೇಲೆ ಲಾರಿ ಹರಿದಿದೆ. ಇನ್ನೊಂದು ಲಾರಿಯನ್ನು ಎಡಬದಿಯಿಂದ ಹಿಂದಿಕ್ಕಲು ಹೋಗಿ ಈ ಅನಾಹುತ ಸಂಭವಿಸಿದೆ. ಶಾಲೆಗೆ ಹೊರಟಿದ್ದ ಬಾಲಕನನ್ನು ಲಾರಿ ಚಾಲಕ ಬಲಿ ಪಡೆದಿದ್ದಾನೆ. ಬಾಲಕ ಅರ್ಹಾನ್ ಬೇಪಾರಿ (10) ಸ್ಥಳದಲ್ಲೇ ಸಾವಿಗೀಡಾದರೆ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
Last Updated : Feb 3, 2023, 8:25 PM IST

ABOUT THE AUTHOR

...view details