ಕರ್ನಾಟಕ

karnataka

ಜನವಸತಿ ಪ್ರದೇಶಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಚಿರತೆ - ವಿಡಿಯೋ

ETV Bharat / videos

ಜನವಸತಿ ಪ್ರದೇಶಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಚಿರತೆ - ವಿಡಿಯೋ - etv bharat karnataka

By ETV Bharat Karnataka Team

Published : Dec 19, 2023, 6:38 PM IST

ಗುವಾಹಟಿ(ಅಸ್ಸೋಂ):ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಗುವಾಹಟಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಫಟಾಸಿಲ್ ಅಂಬ್ರಿಯ ಜಿಎಸ್ ಕಾಲೋನಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನು ಅಳವಡಿಸಿದ್ದರು, ಆದರೆ, ಅವರ ಪ್ರಯತ್ನ ವಿಫಲವಾಯಿತು. ಭಯಭೀತಗೊಂಡಿದ್ದ ಚಿರತೆ ಇಬ್ಬರು ಅರಣ್ಯ ಸಿಬ್ಬಂದಿ ಸೇರಿದಂತೆ ಮೂವರ ಮೇಲೆ ದಾಳಿ ಮಾಡಿದೆ.

ಜಿಎಸ್ ಕಾಲೋನಿಯ ನಿವಾಸಿ ಶ್ಯಾಮಲ್ ದಾಸ್ ಎಂಬುವರ ಮನೆಯಲ್ಲಿ ಚಿರತೆ ಮೊದಲು ಕಾಣಿಸಿಕೊಂಡಿತ್ತು. ಮನೆ ಮಹಡಿಯ ಮೇಲೆ ಗಂಟೆಗಳ ಕಾಲ ಅಲ್ಲಲ್ಲೇ ತಿರುಗಾಡುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಮರೂಪ್ ಪೂರ್ವ ವಿಭಾಗದ ಡಿಎಫ್​ಒ ರೋಹಿಣಿ ಸೈಕಿಯಾ ಪ್ರತಿಕ್ರಿಯಿಸಿ, ಚಿರತೆ ದಾಳಿಯಿಂದ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಸ್ಥಳೀಯರೊಬ್ಬರು ಗಾಯಗೊಂಡಿದ್ದಾರೆ. ನಾವು ಈಗಾಗಲೇ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಿಸಿದ್ದೇವೆ ಎಂದು ತಿಳಿಸಿದ್ದಾರೆ. ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ:ಮೈಸೂರು: ಬೋನಿಗೆ ಬಿದ್ದ ಚಿರತೆ, ಗ್ರಾಮಸ್ಥರ ನಿಟ್ಟುಸಿರು

ABOUT THE AUTHOR

...view details