ಕರ್ನಾಟಕ

karnataka

ಆಸ್ಪತ್ರೆಗೆ ನುಗ್ಗಿದ ಚಿರತೆ

ETV Bharat / videos

ಹೆರಿಗೆ ಮತ್ತು ಕಣ್ಣಿನ ಆಸ್ಪತ್ರೆಗೆ ನುಗ್ಗಿದ ಚಿರತೆ; ಬೆಚ್ಚಿಬಿದ್ದ ಸಿಬ್ಬಂದಿ ರೋಗಿಗಳು - ವಿಡಿಯೋ - ಮಹಾರಾಷ್ಟ್ರದಲ್ಲಿ ಆಸ್ಪತ್ರೆಗೆ ನುಗ್ಗಿದ ಚಿರತೆ

By ETV Bharat Karnataka Team

Published : Dec 13, 2023, 2:37 PM IST

ನಂದೂರ್​ಬಾರ್:ಮಹಾರಾಷ್ಟ್ರದ ನಂದೂರ್​ಬಾರ್​ ಜಿಲ್ಲೆಯ ಆಸ್ಪತ್ರೆಗೆ ಚಿರತೆ ನುಗ್ಗಿರುವ ಘಟನೆ ಮಂಗಳವಾರ ನಡೆದಿದೆ. ಇಲ್ಲಿಯ ಶಹದಾ ಪಟ್ಟಣದಲ್ಲಿನ ಡೊಂಗರಗಾಂವ್ ರಸ್ತೆಯಲ್ಲಿರುವ ಹೆರಿಗೆ ಮತ್ತು ಕಣ್ಣಿನ ಆಸ್ಪತ್ರೆಯೊಂದರಲ್ಲಿ ಚಿರತೆ ಕಾಣಿಸಿಕೊಂಡಿದೆ. 

ಮಂಗಳವಾರ ಬೆಳಗ್ಗೆ ಎಂದಿನಂತೆ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದಾಗ ಅಲ್ಲಿಯ ಸಿಬ್ಬಂದಿಯೊಬ್ಬರಿಗೆ ಚಿರತೆಯ ಧ್ವನಿ ಕೇಳಿಸಿದಂತಾಗಿದೆ. ಬಳಿಕ ಏನೆಂದು ನೋಡಿದಾಗ ಮೂಲೆಯೊಂದರಲ್ಲಿ ಚಿರತೆ ಕುಳಿತಿರುವುದು ಕಂಡು ಬಂದಿದೆ. ಕೂಡಲೇ ಈ ವಿಷಯವನ್ನು ಉಳಿದ ಸಿಬ್ಬಂದಿಗೆ ತಿಳಿಸಿದ್ದಾರೆ. ಕೂಡಲೇ ಹಿಂಬಾಗಿಲನ್ನು ಮುಚ್ಚಿ ಚಿರತೆ ತಪ್ಪಿಸಿಕೊಳ್ಳದಂತೆ ಬಂಧಿಸಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ತಿಳಿಸಿದ್ದಾರೆ. 

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ರಾತ್ರಿ ವೇಳೆ ಚಿರತೆ ಆಸ್ಪತ್ರೆಗೆ ನುಗ್ಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆ ನುಗ್ಗಿದ ವೇಳೆ ಆಸ್ಪತ್ರೆಯಲ್ಲಿ ರೋಗಿಗಳಿದ್ದರು. ಯಾರೊಬ್ಬರ ಮೇಲೂ ಚಿರತೆ ದಾಳಿ ನಡೆಸಿಲ್ಲ. ಸದ್ಯ ಸೆರೆ ಹಿಡಿದಿರುವ ಚಿರತೆಯನ್ನು ಬೇರೊಂದು ಸ್ಥಳಕ್ಕೊ ಸಾಗಿಸಲಾಗಿದೆ. ಇನ್ನು ಚಿರತೆಯ ದೃಶ್ಯಗಳು ಸೆರೆಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿದೆ. 

ಇದನ್ನೂ ಓದಿ:ಮೈಸೂರು: ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ... ವಿಡಿಯೋ...

ABOUT THE AUTHOR

...view details