ಕರ್ನಾಟಕ

karnataka

ಕಾರವಾರ ಬೀಚ್‌ನಲ್ಲಿ ಏಕಾಏಕಿ ಲ್ಯಾಂಡ್ ಆದ ಹೆಲಿಕಾಪ್ಟರ್

ETV Bharat / videos

ಕಾರವಾರ ಬೀಚ್‌ನಲ್ಲಿ ತುರ್ತು ಭೂಸ್ಪರ್ಶಿಸಿದ ಹೆಲಿಕಾಪ್ಟರ್! - ಕೋಸ್ಟ್‌ಗಾರ್ಡ್ ಹೆಲಿಕಾಪ್ಟರ್ ಏಕಾಏಕಿ ಭೂಸ್ಪರ್ಶ

By

Published : Feb 11, 2023, 3:14 PM IST

Updated : Feb 14, 2023, 11:34 AM IST

ಕಾರವಾರ: ನಗರದ ರವೀಂದ್ರನಾಥ ಟಾಗೋರ್​ ಕಡಲ ತೀರದಲ್ಲಿ ಕೋಸ್ಟ್‌ಗಾರ್ಡ್ ಹೆಲಿಕಾಪ್ಟರ್ ಏಕಾಏಕಿ ಭೂಸ್ಪರ್ಶ ಮಾಡಿದ್ದು, ಕೆಲಕಾಲ ಕಡಲ ತೀರದಲ್ಲಿದ್ದವರು ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮೇಲೆ ಆಗಸದಿಂದ ಅತ್ಯಂತ ಕೆಳಕ್ಕೆ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿತ್ತು. ಬಳಿಕ ಏಕಾಏಕಿ ರವೀಂದ್ರನಾಥ ಟಾಗೋರ್​​ ಕಡಲ ತೀರದ ಖಾಲಿ ಜಾಗದಲ್ಲಿ ಭೂ ಸ್ಪರ್ಶ ಮಾಡಿ ಕೆಲ ನಿಮಿಷಗಳ ಕಾಲ ನಿಂತು ಪುನಃ ಮೇಲಕ್ಕೆ ಹಾರಿತು. ಇದರಿಂದಾಗಿ ಕಡಲ ತೀರದಲ್ಲಿದ್ದವರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ಆದರೆ ಪರೀಕ್ಷಾರ್ಥವಾಗಿ ಬೀಚ್​ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್​ ಮಾಡಲಾಗಿದೆ ಎಂಬುದು ಬಳಿಕ ಗೊತ್ತಾಗಿದೆ. 

ತಿಂಗಳ ಹಿಂದೆ ಕೂಡ ಕೋಸ್ಟ್​ ಗಾರ್ಡ್‌ಗೆ ಸೇರಿದ ಹೆಲಿಕಾಪ್ಟರ್​ನ್ನು ಕಡಲ ತೀರ, ಫ್ಲೈ ಓವರ್, ಮಾಲಾದೇವಿ ಕ್ರೀಡಾಂಗಣದಲ್ಲಿ ಕೆಳಕ್ಕಿಳಿಯಲು ಪ್ರಯತ್ನಿಸಿದ್ದರಿಂದ ಜನ ಹೆದರಿದ್ದರು. ಆದರೆ, ಕೋಸ್ಟ್ ಗಾರ್ಡ್ ಕಮಾಂಡರ್ ಮನೋಜ್ ಬಾಡ್ಕರ್ ಆಗಮಿಸುವ ಹಿನ್ನೆಲೆಯಲ್ಲಿ ಕಡಲತೀರದಲ್ಲಿ ಪರೀಕ್ಷಾರ್ಥವಾಗಿ ಲ್ಯಾಂಡ್ ಮಾಡಲಾಗಿದೆ ಎಂಬುದು ಬಳಿಕ ಗೊತ್ತಾಗಿತ್ತು. ಇಂದು ಮತ್ತೊಮ್ಮೆ ಪರೀಕ್ಷಾರ್ಥ ಹೆಲಿಕಾಪ್ಟರ್ ಲ್ಯಾಂಡಿಂಗ್​ ನಡೆಸಲಾಗಿದೆ.

ಇದನ್ನೂ ನೋಡಿ:ಬೆಂಗಳೂರಿನಿಂದ ತೆರಳುತ್ತಿದ್ದ ರವಿಶಂಕರ್ ಗುರೂಜಿ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Last Updated : Feb 14, 2023, 11:34 AM IST

ABOUT THE AUTHOR

...view details