ಬೋಳು ತಲೆಗೆ ಬಂಗಾರದ ಲೇಪನ.. ಚಾಲಾಕಿಯ ಜನ್ಮ ಜಾಲಾಡಿದ ಅಧಿಕಾರಿಗಳು - ದೆಹಲಿಯ IGI ವಿಮಾನ ನಿಲ್ದಾಣದಲ್ಲಿ ಚಿನ್ನದ ಕಳ್ಳಸಾಗಣೆ ಆರೋಪಿ ಬಂಧನ
ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಿ 3ರಲ್ಲಿ ಅಬುಧಾಬಿಯಿಂದ ಆಗಮಿಸಿದ್ದ ಪ್ರಯಾಣಿಕನನ್ನು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. 30.55 ಲಕ್ಷ ಮೌಲ್ಯದ ಸುಮಾರು 630.45 ಗ್ರಾಂ ಚಿನ್ನವನ್ನು ಪೇಸ್ಟ್ ಮಾಡಿ ತಲೆಯಲ್ಲಿಟ್ಟುಕೊಂಡಿದ್ದ ಈ ಚಾಲಾಕಿ. ಬಳಿಕ ಅದರ ಮೇಲೆ ವಿಗ್ ಮೂಲಕ ಮುಚ್ಚಿಕೊಂಡಿದ್ದ. ಅಷ್ಟೇ ಅಲ್ಲದೇ ಆತ ಗುದನಾಳದೊಳಗೂ ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದ. ಆರೋಪಿ ಚಾಪೆ ಕಳೆಗೆ ನುಗ್ಗಿದ್ರೆ, ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿದ್ದಾರೆ. ಇದನ್ನು ಪತ್ತೆ ಹಚ್ಚಿದ ಕಸ್ಟಮ್ ಅಧಿಕಾರಿಗಳು ಆತನಿಂದ 630.45 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Last Updated : Feb 3, 2023, 8:22 PM IST