Watch.. ಬಳ್ಳಾರಿಯಲ್ಲಿ ಕಟ್ಟಿಗೆ ಸ್ಟಾಕ್ ಯಾಡ್‌ರ್ಗೆ ಬೆಂಕಿ: 20 ಲಕ್ಷ ರೂ ನಷ್ಟ - ಮೆಹಬೂಬ್ ನಗರದ ಹರಿಶ್ಚಂದ್ರ ಘಾಟ್ ಬಳಿಯ ಕಟ್ಟಿಗೆ ಸ್ಟಾಕ್
ಬಳ್ಳಾರಿ: ಮೆಹಬೂಬ್ನಗರದ ಹರಿಶ್ಚಂದ್ರ ಘಾಟ್ ಬಳಿಯ ಕಟ್ಟಿಗೆ ಸ್ಟಾಕ್ ಯಾಡ್‌ರ್ಗೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮುಸ್ತಾಕ್ ಎಂಬುವವರಿಗೆ ಸೇರಿದ ಕಟ್ಟಿಗೆ ಯಾರ್ಡ್ ಇದಾಗಿದ್ದು, ಗೃಹ ಹಾಗೂ ಕಟ್ಟಡಗಳಿಗೆ ಕಿಟಕಿ, ಬಾಗಿಲು ಹಾಗೂ ಗೃಹಪಯೋಗಿ ವಸ್ತುಗಳನ್ನು ತಯಾರಿಸಲು ಬೇಕಾಗುವ, ಬೆಲೆ ಬಾಳುವಂತಹ ಕಟ್ಟಿಗೆ ಕೊರೆಯಿಸಿ ಇಲ್ಲಿ ಸಂಗ್ರಹ ಮಾಡಲಾಗಿತ್ತು.
ಮುಸ್ತಾಕ್ ಅವರು ಹೇಳುವ ಪ್ರಕಾರ ಅಂದಾಜು 20 ಲಕ್ಷ ರೂ.ಗಳ ಕಟ್ಟಿಗೆ ಸಂಗ್ರಹವನ್ನು ಇಲ್ಲಿ ಮಾಡಲಾಗಿತ್ತು. ಅಗ್ನಿ ಅವಘಡಕ್ಕೆ ಕಾರಣ ಏನೆಂದು ಗೊತ್ತಾಗಿಲ್ಲ. ಯಾರೋ ದುಷ್ಕರ್ಮಿಗಳು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ಕಟ್ಟಿಗೆ ಸಂಗ್ರಹಕ್ಕೆ ಬೆಂಕಿ ಅಂಟಿಸಿರಬಹುದು ಎಂದು ಅನುಮಾನಿಸಲಾಗಿದೆ. ಇನ್ನು ಅಗ್ನ ಅವಘಡದ ಮಾಹಿತಿ ಸಿಗುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಕೂಡ ಅಗ್ನಿಯನ್ನು ತಕ್ಷಣಕ್ಕೆ ಆರಿಸಲಾಗಲಿಲ್ಲ. ಬೆಂಕಿ ಆರುವಷ್ಟೊತ್ತರಲ್ಲಿ ಲಕ್ಷಾಂತರ ರೂ.ಗಳ ಮೌಲ್ಯದ ಕಟ್ಟಿಗೆ ಭಸ್ಮ ಆಗಿ ಹೋಗಿತ್ತು.
ಇದನ್ನೂ ಓದಿ:ದಾವಣಗೆರೆ: ಕಾಡಾನೆ ಸೆರೆಗೆ ಸಕ್ಕರೆಬೈಲು ಆನೆಗಳಿಂದ ಕಾರ್ಯಾಚರಣೆ