ಕರ್ನಾಟಕ

karnataka

ಬಿಸಿಲಿನ ಧಗೆ: ಸ್ಕೂಟರ್​ ಓಡಿಸುತ್ತಲೇ ಸ್ನಾನ ಮಾಡಿದ ಯುವಕನಿಗೆ ಪೊಲೀಸರಿಂದ ಶಾಕ್

ETV Bharat / videos

ಬಿಸಿಲಿನ ಧಗೆ: ಸ್ಕೂಟರ್​ ಓಡಿಸುತ್ತಲೇ ಸ್ನಾನ ಮಾಡಿದ ಯುವಕನಿಗೆ ಪೊಲೀಸರಿಂದ ಶಾಕ್ - ತಮಿಳುನಾಡಿನಲ್ಲಿ ಬಿಸಿಲಿನ ಧಗೆ

By

Published : May 18, 2023, 7:39 PM IST

ತಂಜಾವೂರು (ತಮಿಳುನಾಡು):ದೇಶಾದ್ಯಂತ ಬಿಸಿಲಿನ ಧಗೆ ದಿನದಿಂದ ಹೆಚ್ಚುತ್ತಲೇ ಇದೆ. ಅದರಲ್ಲೂ, ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆಯ ತೀವ್ರ ತಾಪಕ್ಕೆ ಜನರು ಪರದಾಡುತ್ತಿದ್ದಾರೆ. ಇದರ ನಡುವೆ ಯುವಕನೊಬ್ಬ ತನ್ನ ಸ್ಕೂಟರ್​ ಚಲಾಯಿಸುತ್ತಲೇ ಬಕೆಟ್‌ನಿಂದ ತಲೆ ಮೇಲೆ ನೀರು ಸುರಿದುಕೊಂಡು ಸ್ನಾನ ಮಾಡಿಕೊಂಡು ಹೋಗುತ್ತಿರುವ ಘಟನೆ ತಂಜಾವೂರಿನಲ್ಲಿ ನಡೆದಿದೆ. ಈ ದೃಶ್ಯವನ್ನು ಆತನ ಸ್ನೇಹಿತ ವಿಡಿಯೋ ಮಾಡಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಲಾಗಿದ್ದು, ಸಾಕಷ್ಟು ವೈರಲ್​ ಆಗಿದೆ. 

ತಂಜಾವೂರಿನ ಕೀಳವಾಸಲ್ ಪ್ರದೇಶದಲ್ಲಿ ಮೇ 17ರಂದು ಈ ಘಟನೆ ನಡೆದಿದೆ. ಸ್ಕೂಟರ್​ನಲ್ಲಿ ಯುವಕ ಮುಂದೆ ನೀರು ತುಂಬಿರುವ ಬಕೆಟ್​ನಲ್ಲಿ ಇಟ್ಟುಕೊಂಡಿದ್ದು, ಸ್ಕೂಟರ್​ ಓಡಿಸುತ್ತಲೇ ಟಬ್​ನಿಂದ ತಲೆ ಮೇಲೆ ನೀರು ಸುರಿದುಕೊಂಡಿದ್ದಾನೆ. ಮತ್ತೊಂದೆಡೆ, ಆತನ ಸ್ನೇಹಿತ ಈ ದೃಶ್ಯವನ್ನು ತನ್ನ ಮೊಬೈಲ್​ನಲ್ಲಿ ಸೆರೆಹಿಡಿದ್ದಾನೆ. ಅಲ್ಲದೇ, ವಿಡಿಯೋವನ್ನು ಈ ಯುವಕರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದು, ಸ್ಕೂಟರ್​ ಸವಾರ ಮತ್ತು ವಿಡಿಯೋ ಮಾಡಿದ ಸ್ನೇಹಿತನನ್ನು ಪತ್ತೆ ಹಚ್ಚಿದ್ದಾರೆ. ಇವರನ್ನು 23 ವರ್ಷದ ಅರುಣಾಚಲಂ ಮತ್ತು 24 ವರ್ಷದ ಪ್ರಸನ್ನ ಎಂದು ಗುರುತಿಸಲಾಗಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸಿದ ಕಾರಣಕ್ಕೆ 2000 ದಂಡ ರೂಪಾಯಿ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಸಂಚಾರಿ ವಿಭಾಗದ ಇನ್ಸ್​ಪೆಕ್ಟರ್ ರವಿಚಂದ್ರನ್ ತಿಳಿಸಿದ್ದಾರೆ.

ಇದನ್ನೂ ಓದಿ:ಮಂಡ್ಯ : ಕುರಿಮರಿ ನುಂಗಲು ಯತ್ನಿಸಿದ ಬೃಹತ್​ ಗಾತ್ರದ ಹೆಬ್ಬಾವು ಸೆರೆ

ABOUT THE AUTHOR

...view details