ಕಾರಿನ ನಂಬರ್ ಪ್ಲೇಟ್ನಲ್ಲಿ 'ಮೋದಿ': ಅಮೆರಿಕದ ಅನಿವಾಸಿ ಭಾರತೀಯನ ವಿಶೇಷ ಅಭಿಮಾನ - ಕಾರಿನ ನಂಬರ್ ಪ್ಲೇಟ್ನಲ್ಲಿ ಮೋದಿ
ಮೇರಿಲ್ಯಾಂಡ್ (ಅಮೆರಿಕ):ವಿಶ್ವದ ಪ್ರಭಾವಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲೆಲ್ಲೂ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ಕೆಲ ಅಭಿಮಾನಿಗಳು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದನ್ನು ನೋಡಿದ್ದೇವೆ. ಅಮೆರಿಕದಲ್ಲಿನ ಅಭಿಮಾನಿಯೊಬ್ಬ ತನ್ನ ಕಾರಿನ ನಂಬರ್ ಪ್ಲೇಟ್ಗೆ ಮೋದಿ ಅವರ ಹೆಸರನ್ನು ಬರೆಸಿಕೊಂಡಿದ್ದಾನೆ. ನಂಬರ್ ಇರುವ ಇಡೀ ಜಾಗದಲ್ಲಿ 'ಮೋದಿ' ಎಂದಿದೆ. ಅದರ ಮೇಲೆ ಚಿಕ್ಕದಾಗಿ ನಂಬರ್ ಕಾಣಸಿಗುತ್ತದೆ.
ಇಲ್ಲಿನ ಮೇರಿಲ್ಯಾಂಡ್‌ನ ನಿವಾಸಿಯಾಗಿರುವ ಅನಿವಾಸಿ ಭಾರತೀಯ ರಾಘವೇಂದ್ರ ಎಂಬುವರು ಪ್ರಧಾನಿ ಮೋದಿಯ ದೊಡ್ಡ ಅಭಿಮಾನಿಯಾಗಿದ್ದಾರೆ. ಇದರ ಸಂಕೇತವಾಗಿ ಮೋದಿ ಅವರ ಹೆಸರನ್ನು ಕಾರಿನ ನಂಬರ್ ಪ್ಲೇಟ್ನಲ್ಲಿ ಅರಳಿಸಿದ್ದಾರೆ.
ನಾನು ಈ ಪ್ಲೇಟ್ ಅನ್ನು 2016ರ ನವೆಂಬರ್‌ನಲ್ಲಿ ಪಡೆದುಕೊಂಡೆ. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸ್ಫೂರ್ತಿ. ಅವರು ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ, ಜಗತ್ತಿಗೆ ಏನಾದರೂ ಒಳ್ಳೆಯದನ್ನು ಮಾಡಲು ನನ್ನನ್ನು ಪ್ರೇರೇಪಿಸಿದ್ದಾರೆ. ಅಮೆರಿಕದ ಸಂಸತ್ತಿನಲ್ಲಿ ಭಾಷಣ ಮಾಡಲು ಪ್ರಧಾನಿ ಮೋದಿ ಇಲ್ಲಿಗೆ ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ರಾಘವೇಂದ್ರ ಅವರು ಇದೇ ವೇಳೆ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಜೂನ್ 20-24 ರವರೆಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ, ಹಲವಾರು ಅಮೆರಿಕನ್ ರಾಜಕಾರಣಿಗಳು, ಪ್ರಮುಖ ನಾಗರಿಕರು ಮತ್ತು ವಲಸೆಗಾರರ ಜೊತೆ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ:ಪಿಎಂ ಮೋದಿ ಅಮೆರಿಕ ಭೇಟಿಗೂ ಮುನ್ನ ಶ್ವೇತಭವನದ ಹೊರಗೆ ಹಾರಾಡುತ್ತಿರುವ ತ್ರಿವರ್ಣ ಧ್ವಜ