Watch ಬಾಯ್ಲರ್ ಇಳಿಸಲು ಬಂದ ಕ್ರೇನ್ ಪಲ್ಟಿ: 15 ಅಡಿ ಎತ್ತರದಲ್ಲಿ ಸಿಲುಕಿದ ಯಂತ್ರ - ಪಂಜಾಬ್ನ ಲೂಧಿಯಾನದಲ್ಲಿ
ಲೂಧಿಯಾನ (ಪಂಜಾಬ್): ಬಾಯ್ಲರ್ ಇಳಿಸಲು ಬಂದ ಕ್ರೇನ್ ಪಲ್ಟಿಯಾಗಿ 15 ಅಡಿ ಎತ್ತರದಲ್ಲಿ ಸಿಲುಕಿದ ಘಟನೆ ಪಂಜಾಬ್ನ ಲೂಧಿಯಾನದಲ್ಲಿ ನಡೆದಿದೆ. ಇದರಿಂದಾಗಿ ಇಲ್ಲಿನ ಗೌಶಾಲಾ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಗೌಶಾಲಾದ ಕಿರದಾದ ರಸ್ತೆಯಲ್ಲಿರುವ ಅಂಗಡಿಯೊಂದಕ್ಕೆ ಬಾಯ್ಲರ್ ಅಳವಡಿಸಲು ಮುಂಜಾನೆ ಕ್ರೇನ್ ಬಂದಿತ್ತು. ಬಾಯ್ಲರ್ ಇಳಿಸುವ ವೇಳೆ ಕ್ರೇನ್ ಪಲ್ಟಿಯಾಗಿದೆ. ಈ ವೇಳೆ, ಅಲ್ಲಿಯೇ ಇದ್ದ ಟ್ತ್ಯಾಕ್ಟರ್ ಮೇಲೆ ಬಾಯ್ಲರ್ ಬಿದ್ದಿದ್ದು, ಟ್ರ್ಯಾಕ್ಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ರಸ್ತೆಯಲ್ಲಿ ಕ್ರೇನ್ ಆಗಮಿಸಿದ್ದರಿಂದ ರಸ್ತೆಯ ಸುತ್ತಮುತ್ತಲಿನ ಕಟ್ಟಡಗಳಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೇನ್ ಮಾಲೀಕ, ಅಂಗಡಿಯೊಂದಕ್ಕೆ ಬಾಯ್ಲರ್ ಅಳವಡಿಸಲು ಕ್ರೇನ್ ಇಲ್ಲಿಗೆ ಬಂದಿತ್ತು. ರಸ್ತೆ ಕಿರಿದಾದ ಕಾರಣ ಅಪಘಾತ ಸಂಭವಿಸಿದೆ. ಸದ್ಯ ತೆರವು ಕಾರ್ಯ ನಡೆಯುತ್ತಿದೆ. ಅಪಘಾತದಿಂದ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಹೇಳಿದರು. ಕ್ರೇನ್ ಪಲ್ಟಿಯಾಗಿರುವುದನ್ನು ನೋಡಲು ಜನರು ಜಮಾಯಿಸಿದ್ದರು.
ಇದನ್ನೂ ಓದಿ :ಡಿಎಂಕೆ ಸಭೆ ವೇಳೆ 'ಭಾರತ್ ಮಾತಾ ಕೀ ಜೈ' ಘೋಷಣೆ : ಅಡ್ಡಗಟ್ಟಿ ಕಾರು ಪುಡಿ ಮಾಡಿದ ಕಾರ್ಯಕರ್ತರು