ಚಿಕ್ಕಮಗಳೂರು: ನಿತ್ಯವೂ ನಂದಿನಿ ಡೈರಿ ಮುಂಭಾಗವೇ ತನ್ನ ಕರುವಿಗೆ ಹಾಲುಣಿಸುವ ಹಸು - ನಂದಿನಿ ಡೈರಿ ಮುಂಭಾಗ ಕರುವಿಗೆ ಹಾಲು ನೀಡುವ ಹಸು
Published : Aug 28, 2023, 6:09 PM IST
ಚಿಕ್ಕಮಗಳೂರು:ಹಸುವೊಂದು ದಿನವು ತನ್ನ ಕರುವಿಗೆ ನಂದಿನಿ ಹಾಲಿನ ಕೇಂದ್ರದ ಮುಂಭಾಗವೇ ಹಾಲುಣಿಸುವ ಪ್ರಸಂಗವೊಂದು ಮೂಡಿಗೆರೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಪ್ರವೀಣ್ ಪೂಜಾರಿ ಎಂಬುವರ ಅಂಗಡಿ ಮುಂಭಾಗವೇ ದಿನನಿತ್ಯ ಹಸು ತನ್ನ ಕರುವಿಗೆ ಹಾಲು ಕುಡಿಸುತ್ತದೆ. ಕಳೆದ ಒಂದೂವರೆ ತಿಂಗಳಿನಿಂದಲೂ ಹೀಗೆ ಮಾಡುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕರು ಹಾಲು ಕುಡಿಯಲು ಯತ್ನಿಸಿದ ಕೂಡಲೇ ಹಸು ನೇರವಾಗಿ ನಂದಿನಿ ಹಾಲಿನ ಡೈರಿಗೆ ಬಂದು ಕರುವಿಗೆ ಹಾಲುಣಿಸುತ್ತಿದೆ. ಅಂಗಡಿ ಮಾಲೀಕ ಪ್ರವೀಣ್ ಪೂಜಾರಿ ನಿತ್ಯ ಹಸುವಿಗೆ ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನ ಕೊಡುತ್ತಿದ್ದಾರೆ. ಹಾಗಾಗಿ ಈ ಹಸು ಅಂಗಡಿಗೆ ಪ್ರತಿದಿನವೂ ಬರುತ್ತದೆ ಎಂದು ಹೇಳುತ್ತಾರೆ. ಕರು ಹಾಕಿದ ಮೇಲೂ ಹಸು ಅಂಗಡಿ ಬಳಿಯೇ ಇತ್ತು. ಆಗಲೂ ಪ್ರವೀಣ್ ಹಸುವಿನ ಆರೈಕೆ ಮಾಡಿದ್ದರು. ಹಾಗಾಗಿ, ಸದಾ ಅಂಗಡಿ ಮುಂಭಾಗದಲ್ಲೇ ಇರುವ ಹಸು ತನ್ನ ಕರುವಿಗೆ ಹಾಲು ಕುಡಿಸುವಾಗಲೂ ಬೇರೆಲ್ಲೂ ಹೋಗದೇ ಅಂಗಡಿ ಬಳಿಯೇ ಬಂದು ಹಾಲು ಕುಡಿಸುತ್ತಿರುವುದು ವಿಶೇಷ ಎಂಬುದು ಸ್ಥಳೀಯರ ಮಾತು. ರಾಜ್ಯದ ಖ್ಯಾತ ಬ್ರ್ಯಾಂಡ್ ನಂದಿನಿ ಹಾಲಿನ ಪ್ಯಾಕೆಟ್ ಮೇಲೂ ಹಸುವಿನ ಚಿತ್ರ ಇದೆ.
ಇದನ್ನೂ ಓದಿ:ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ 3 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ರಿಕಾ ಹುಲಿ- ವಿಡಿಯೋ