ಪಾರಿವಾಳದ ಗೂಡಿನಲ್ಲಿ ಕುಳಿತು ಬುಸ್ಗುಟ್ಟಿದ ನಾಗಪ್ಪ... ಉರಗ ತಜ್ಞರಿಂದ ರಕ್ಷಣೆ - ವಿಡಿಯೋ - ಉರಗ ತಜ್ಞ ದಿಲೀಪ್ ಮತ್ತು ಗುರುಕಿರಣ್
ತುಮಕೂರು:ಜಿಲ್ಲೆಯ ಕೊರಟಗೆರೆ ತಾಲೂಕು ತಂಗನಹಳ್ಳಿ ಬಳಿ ಇರುವ ನತೀಕ್ಷ ಪಾಮ್ ಹೌಸ್ನಲ್ಲಿ ಪಾರಿವಾಳ ಗೂಡಿನಲ್ಲಿ ಬೃಹತ್ ಗಾತ್ರದ ನಾಗರಹಾವು ಸೇರಿಕೊಂಡು ಆತಂಕ ಸೃಷ್ಟಿಸಿತ್ತು. ಫಾರ್ಮೋಸ್ನ ಮಾಲೀಕ ಹರ್ಷವರ್ಧನ ಎಂಬುವರು ತಕ್ಷಣ ತುಮಕೂರಿನ ವರಂಗಲ್ ಫೌಂಡೇಶನ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿದ್ದರು. ತಕ್ಷಣ ಉರಗ ತಜ್ಞ ದಿಲೀಪ್ ಮತ್ತು ಗುರುಕಿರಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗೂಡಿನಲ್ಲಿದ್ದ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ. ನಂತರ ದೇವರಾಯನದುರ್ಗ ಅರಣ್ಯಕ್ಕೆ ರವಾನಿಸಿದರು. ಇನ್ನು ಕೋಪಗೊಂಡಿದ್ದ ಹಾವು ರಕ್ಷಣಾ ಸಂದರ್ಭದಲ್ಲಿ ಬುಸ್ಗುಟ್ಟಿದ್ದು ಉರಗ ತಜ್ಞ ದಿಲೀಪ್ ತಮ್ಮ ಚಾಕಚಕ್ಯತೆಯಿಂದ ಸಂಬಾಳಿಸಿ ಹಾವನ್ನು ಚೀಲದೊಳಗೆ ತುಂಬಿಸುವಲ್ಲಿ ಯಶಸ್ವಿಯಾದರು.
ಇನ್ನು ಇಷ್ಟು ದೊಡ್ಡ ನಾಗರಹಾವು ಪಾರಿವಾಳದ ಗೂಡಿನಲ್ಲಿ ಮೊಟ್ಟೆಗಳನ್ನು ಭಕ್ಷಿಸಲು ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಹಾವುಗಳು ತಮ್ಮ ಭೇಟೆಗಾಗಿ, ಇಲ್ಲ ವಾಸಕ್ಕಾಗಿ ಈ ತರಹದ ಗೂಡು ಇಲ್ಲವಾದಲ್ಲಿ, ಇಕ್ಕಟು ಜಾಗ, ಸಂದುಗಳಲ್ಲಿ ನುಸುಳಿ ಸೇರಿಕೊಳ್ಳುತ್ತದೆ. ಅದಕ್ಕಾಗಿಯೇ ನೀವು ಪಕ್ಷಿಗಳನ್ನು ಹೆಚ್ಚಾಗಿ ಸಾಕುತ್ತಿದ್ದಲ್ಲಿ ಆ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಂಡರೇ ಉತ್ತಮ ಎಂದು ಉರುಗ ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ನೀರಿನ ತೊಟ್ಟಿಯಲ್ಲಿ ಸಿಲುಕಿದ್ದ ಕಾಡಾನೆ ಮರಿಯ ರಕ್ಷಣೆ -ವಿಡಿಯೋ