Car fell into canal: ಮಂಡ್ಯದ ವಿಸಿ ನಾಲೆಗೆ ಬಿದ್ದ ಕಾರು: ಚಾಲಕ ನಾಪತ್ತೆ, ಮುಂದುವರೆದ ಶೋಧ - ಚಾಲಕ ನಾಪತ್ತೆ
ಮಂಡ್ಯ: ನಿಯಂತ್ರಣ ತಪ್ಪಿದ ಕಾರೊಂದು ವಿಸಿ ನಾಲೆಗೆ ಪಲ್ಟಿಯಾಗಿದ್ದು ಚಾಲಕ ನಾಪತ್ತೆಯಾಗಿರುವ ಘಟನೆ ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯಲ್ಲಿ ನಡೆದಿದೆ. ಚಾಲಕ ಲೋಕೇಶ್‌ಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಹೋಗಿ ನಾಲೆಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ :Watch video : ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ವಾಹನಗಳು : ಮನೆಗಳಿಗೆ ಕೆಸರು ನುಗ್ಗಿ ಜನರ ಪರದಾಟ
ಮಳೆಯಿಂದಾಗಿ ನಾಲೆಯಲ್ಲಿ ಹೆಚ್ಚು ನೀರು ಹೆಚ್ಚು ತುಂಬಿರುವುದರಿಂದ ಕಾರು ಸಂಪೂರ್ಣ ಮುಳುಗಡೆಯಾಗಿದೆ. ಕಾರಿನಲ್ಲಿದ್ದ ಓರ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾಲುವೆಯ ನೀರು ನಿಲ್ಲಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜೊತೆಗೆ, ಕಾರನ್ನು ಮೇಲೆತ್ತಲು ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ತುಮಕೂರು ಹೇಮಾವತಿ ನಾಲೆಗೆ ಕಾಲುಜಾರಿ ಬಿದ್ದು ಅಸುನೀಗಿದ ಇಬ್ಬರು ಅಪ್ರಾಪ್ತರು : ಒಬ್ಬನ ರಕ್ಷಣೆ