ಅವಸರವೇ ಅಪಘಾತಕ್ಕೆ ಕಾರಣ.. ಕಾರು ಗುದ್ದಿದ ರಭಸಕ್ಕೆ ಡಿವೈಡರ್ ಮೇಲೆ ತೂರಿ ಬಿದ್ದ ಯುವತಿ - ರಸ್ತೆ ದಾಟುವಾಗ ಯುವತಿಗೆ ಕಾರ್ ಡಿಕ್ಕಿ
ಬೆಂಗಳೂರು : ರಸ್ತೆ ದಾಟುವಾಗ ಯುವತಿಗೆ ಕಾರ್ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೇ ತಿಂಗಳ 17 ರಂದು ಅಶ್ವಿನಿ ಎಂಬ ಯುವತಿ ಆತುರವಾಗಿ ರಸ್ತೆ ದಾಟುವಾಗ ಕಾರ್ ಡಿಕ್ಕಿಯಾಗಿ ಡಿವೈಡರ್ ಮೇಲೆ ತೂರಿ ಬಿದ್ದಿದ್ದರು. ರಸ್ತೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು, ಸದ್ಯ ಗಾಯಗೊಂಡಿರುವ ಅಶ್ವಿನಿ ಅವರಿಗೆ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಆರ್.ಟಿ.ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:28 PM IST