ಮರ್ಸಿಡಿಸ್‌ಗೆ ರಿಕ್ಷಾ ಚಾಲಕನ ಸಹಾಯ; ಅಂತೂ ಗ್ಯಾರೇಜ್ ತಲುಪಿತು ಕಾರು!
ಮಹಾರಾಷ್ಟ್ರ: ಪುಣೆಯಲ್ಲಿ ಕೆಟ್ಟು ನಿಂತು ಹೋಗಿದ್ದ ಮರ್ಸಿಡಿಸ್ ಕಾರು ರಿಕ್ಷಾ ಚಾಲಕನ ಸಹಾಯದಿಂದ ಗ್ಯಾರೇಜ್ ತಲುಪಿತು. ಸಾಮಾನ್ಯವಾಗಿ ನಾಲ್ಕು ಚಕ್ರದ ವಾಹನವನ್ನು ಅಷ್ಟೇ ಗಾತ್ರದ ವಾಹನ ಎಳೆದುಕೊಂಡು ಹೋಗುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ರಿಕ್ಷಾ ಚಾಲಕನೊಬ್ಬ ಹಾಳಾಗಿದ್ದ ಐಷಾರಾಮಿ ಕಾರನ್ನು ಕಾಲಿನಲ್ಲಿ ತಳ್ಳುವ ಮೂಲಕ ನಡು ರಸ್ತೆಯಿಂದ ಗ್ಯಾರೇಜ್ ಸೇರಿಸಲು ಸಹಾಯ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:36 PM IST