ಕರ್ನಾಟಕ

karnataka

ETV Bharat / videos

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್​ಗೆ ಕಾರು ಡಿಕ್ಕಿ‌.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ - kannada top news

By

Published : Dec 26, 2022, 3:27 PM IST

Updated : Feb 3, 2023, 8:37 PM IST

ಬೆಂಗಳೂರು: ಸಂಚಾರಿ ಪೊಲೀಸ್ ಕಾನ್ಸ್​ಟೇಬಲ್​ಗೆ ಕಾರು ಡಿಕ್ಕಿಯಾದ ಪರಿಣಾಮ ಕಾಲಿನ ಮೂಳೆ ಮುರಿದಿರುವ ಘಟನೆ ಬೈಯಪ್ಪನಹಳ್ಳಿಯ ಕಗ್ಗದಾಸನಪುರ ಬಳಿ ನಡೆದಿದೆ. ಇದೇ ತಿಂಗಳ 24ರಂದು ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂಚಾರ ನಿರ್ವಹಣೆಯ ಕರ್ತವ್ಯದಲ್ಲಿದ್ದಾಗ ಜೀವನ್ ಭೀಮಾನಗರ ಸಂಚಾರ ಠಾಣೆಯ ಕಾನ್ಸ್​ಟೇಬಲ್​ ರಮೇಶ್​ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಯಾಳು ರಮೇಶ್​ ಅವರನ್ನು​ ಹಾಸ್ಮೆಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕನ ವಿರುದ್ಧ ಜೀವನ್ ಭೀಮಾನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:37 PM IST

ABOUT THE AUTHOR

...view details