ಹುಲಿ ದಾಳಿಯಿಂದ ಪಾರಾದ ಕಾಡೆಮ್ಮೆ: ಬಂಡೀಪುರ ಸಫಾರಿ ವಿಡಿಯೋ ವೈರಲ್
Published : Dec 18, 2023, 12:35 PM IST
ಚಾಮರಾಜನಗರ: ಗಾಂಭೀರ್ಯದಿಂದಲೇ ಕಾಡಿನ ರಾಜ ಎನಿಸಿಕೊಳ್ಳುವ ಹುಲಿಯು ತಾನಾಡುವ 100 ಬೇಟೆಗಳಲ್ಲಿ ಯಶಸ್ಸು ಕಾಣುವುದು ಬೆರಳೆಣಿಕೆಯಷ್ಟು ಮಾತ್ರ ಎಂದು ಸಂಶೋಧನೆ ತಿಳಿಸುತ್ತದೆ. ಅದರಂತೆ, ಇಲ್ಲೊಂದು ಕಾಡೆಮ್ಮೆ ಹುಲಿರಾಯನ ಬೇಟೆಯಿಂದ ಜಸ್ಟ್ ಮಿಸ್ ಆಗಿ ಬಚಾವಾಗಿದೆ.
ದೇಶದ ಜನಪ್ರಿಯ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ಬಂಡೀಪುರ ಅರಣ್ಯದಲ್ಲಿ ಈ ಬೇಟೆ ದೃಶ್ಯ ಸೆರೆಯಾಗಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತನ್ನ ಮೇಲೆ ಹುಲಿ ದಾಳಿ ಮಾಡಲು ಮುಂದಾಗುವುದನ್ನು ಗಮನಿಸಿ ಕಾಡೆಮ್ಮೆ ಮಿಂಚಿನಂತೆ ಓಡಿ ಹುಲಿ ಬಾಯಿಂದ ಪಾರಾಗಿದೆ. ಕೆಲವೇ ಮೀಟರ್ ಅಟ್ಟಾಡಿಸಿದ ಹುಲಿ ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸಾಗಿದ್ದು, ಹುಲಿಯ ಚೇಸಿಂಗ್ ದೃಶ್ಯವನ್ನು ಸಫಾರಿಗರು ಸೆರೆ ಹಿಡಿದು ಪುಳಕಿತರಾಗಿದ್ದಾರೆ.
ಇತ್ತೀಚೆಗಷ್ಟೇ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿಯೊಂದು ಕಾಡೆಮ್ಮೆ ಬೇಟೆಯಾಡಿ ಮಾಂಸವನ್ನು ಕಿತ್ತು ತಿನ್ನುತ್ತಿರುವ ದೃಶ್ಯ ಸೆರೆಯಾಗಿತ್ತು. ಜನರು ಗೋಪಾಲಸ್ವಾಮಿ ಬೆಟ್ಟದಿಂದ ಹಿಂದಿರುಗುವಾಗ ಗುಡ್ಡದಲ್ಲಿ, ಕಾಡೆಮ್ಮೆಯ ತಲೆಭಾಗವನ್ನು ಹುಲಿರಾಯ ಕಿತ್ತು ಎಳೆದೊಯ್ಯುತ್ತಿರುವ ದೃಶ್ಯ ಕಂಡುಬಂದಿತ್ತು. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು
ಇದನ್ನೂ ಓದಿ:Tiger hunts Bison: ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆ ನಡುವೆ ಕಾಡೆಮ್ಮೆ ಬೇಟೆಯಾಡಿದ ಹುಲಿ- ವಿಡಿಯೋ