ಕರ್ನಾಟಕ

karnataka

ETV Bharat / videos

ಆಹಾರ ಅರಸಿ ಜಮೀನಿಗೆ ಬಂದು ಮರದಲ್ಲಿ ಸಿಲುಕಿಕೊಂಡ ಕರಡಿ.. ವಿಡಿಯೋ - ಈಟಿವಿ ಭಾರತ ಕನ್ನಡ

By

Published : Jan 27, 2023, 5:59 PM IST

Updated : Feb 3, 2023, 8:39 PM IST

ತುಮಕೂರು:ಆಹಾರ ಅರಸಿ ಬಂದ ಕರಡಿಯೊಂದು ಮರದಲ್ಲಿ ಸಿಲುಕಿಕೊಂಡು ನರಳಾಡಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಾಡಬೋರನಹಳ್ಳಿ ಗ್ರಾಮದಲ್ಲಿ ಗುರುವಾರದಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ರಾಜಣ್ಣ ಎಂಬುವರ ಜಮೀನಿನಲ್ಲಿ ಬೆಳೆಯಲಾದ ಸಪೋಟಾ ಹಣ್ಣು ತಿನ್ನಲು ಹೋಗಿ ಮರಕ್ಕೆ ಕಟ್ಟಿದ್ದ ತಂತಿಗೆ ಸಿಲುಕಿ ಕರಡಿ ಒದ್ದಾಡಿದೆ. ಇದನ್ನು ಕಂಡ ಗ್ರಾಮಸ್ಥರು ಕೂಡಲೇ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಕರಡಿಗೆ ಅರವಳಿಕೆ ಮದ್ದು ನೀಡಿ ರಕ್ಷಣೆ ಮಾಡಿದ್ದಾರೆ. ಇನ್ನು ಸುಮಾರು ಮೂರು ವರ್ಷದ ಗಂಡು ಕರಡಿ‌ ಇದಾಗಿದೆ. ಹುಲಿಯೂರು ದುರ್ಗ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಒಂಟಿ ಸಲಗದ ರಿಟರ್ನ್ ಸವಾರಿ: ತೊಂದರೆ ಕೊಡಲ್ಲ, ಆದರೂ ಎಚ್ಚರಿಕೆ ಇರಲಿ

Last Updated : Feb 3, 2023, 8:39 PM IST

ABOUT THE AUTHOR

...view details