ಪಠಾಣ್ ಚಿತ್ರದ ಪೋಸ್ಟರ್ ಧ್ವಂಸ: 9 ಮಂದಿ ಬಜರಂಗದಳ ಕಾರ್ಯಕರ್ತರ ಬಂಧನ - ಭಜರಂಗದಳದ ಕಾರ್ಯಕರ್ತರು
ಮೀರಾ ಭಾಯಂದರ್(ಮಹಾರಾಷ್ಟ್ರ): ಬಹುಚರ್ಚಿತ ಚಿತ್ರ ಪಠಾಣ್ ಪ್ರಸ್ತುತ ಭಾರಿ ಸುದ್ದಿಯಲ್ಲಿದೆ. ಒಂದೆಡೆ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಭಾನುವಾರ ಸಂಜೆ ಭಜರಂಗದಳದ ಕಾರ್ಯಕರ್ತರು ಭಾಯಂದರ್ ವೆಸ್ಟ್‌ನ ಮ್ಯಾಕ್ಸ್ ಮಾಲ್‌ನಲ್ಲಿರುವ ಚಿತ್ರ ಮಂದಿರ ಮುಂಭಾಗವನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ಭಾಯಂದರ್ ಪೊಲೀಸರು ಒಂಬತ್ತು ಮಂದಿ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಠಾಣ್ ಚಿತ್ರದ ಪೋಸ್ಟರ್‌ಗಳನ್ನು ಹರಿದು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿ ಕಲ್ಲು ಮತ್ತು ಕೋಲುಗಳಿಂದ ಚಿತ್ರಪಟದ ಪೋಸ್ಟರ್ ಗಳನ್ನು ಧ್ವಂಸಗೊಳಿಸಿದ್ದಾರೆ. ಎಲ್ಲಾ ಚಿತ್ರಮಂದಿರಗಳಲ್ಲಿ ಸ್ಥಳೀಯ ಪೊಲೀಸರು ಬಂದೋಬಸ್ತ್ ಇದ್ದರೂ, ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಹೇಗೆ ಬಂದರು ಎಂಬ ಪ್ರಶ್ನೆ ಈಗ ಉದ್ಭವಿಸಿದೆ.