ಸಿನಿಮಾ ಗೆದ್ದ ಖುಷಿ: ಚಾರ್ಲಿ ಹೆಸರಲ್ಲಿ 5 ಕೋಟಿ, ಚಿತ್ರ ತಂಡಕ್ಕೆ 10 ಕೋಟಿ ರೂ. ಕೊಟ್ಟ ರಕ್ಷಿತ್ ಶೆಟ್ಟಿ - ರಕ್ಷಿತ್ ಶೆಟ್ಟಿ ದೊಡ್ಡತನ
ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಅಷ್ಟೇ ಅಲ್ಲ, ನಿಜ ಜೀವನದಲ್ಲೂ ಮತ್ತೊಮ್ಮೆ ಹೀರೋ ಆಗಿದ್ದಾರೆ. ಸಿನಿಮಾ ಆಶಯದಂತೆ ಬೀದಿ ನಾಯಿಗಳ ರಕ್ಷಣೆಗೆ ಚಾರ್ಲಿ ಹೆಸರಲ್ಲಿ ಬ್ಯಾಂಕ್ನಲ್ಲಿ 5 ಕೋಟಿ ರೂಪಾಯಿ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿ ಹಣದಿಂದ ಎನ್ಜಿಒಗಳಿಗೆ ಕೊಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಶೂಟಿಂಗ್ ವೇಳೆ ಬೆವರು ಹರಿಸಿದ ತಂಡದವರಿಗೆಲ್ಲರಿಗೂ ಸೇರಿ 10 ಕೋಟಿ ಹಣ ನೀಡಲು ರಕ್ಷಿತ್ ಮುಂದಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ ವಿಶ್ವದಾದ್ಯಂತ ಉತ್ತಮ ಗಳಿಕೆ ಕಂಡ ಹಿನ್ನೆಲೆಯಲ್ಲಿ ಸುಮಾರು 100 ಕೋಟಿಯಷ್ಟು ಆದಾಯ ತಂದಿದೆ. ಇದರಿಂದ ರಕ್ಷಿತ್ ಶೆಟ್ಟಿ ಹಾಗೂ ಟೀಂ ಖುಷಿಯಾಗಿದೆ.
Last Updated : Feb 3, 2023, 8:24 PM IST