ಕರ್ನಾಟಕ

karnataka

ಮಹೀಂದ್ರ

ETV Bharat / videos

ಆನಂದ್ ಮಹೀಂದ್ರಾ ಅವರಿಂದ 75 ಲಕ್ಷ ಮೌಲ್ಯದ ಎಕ್ಸ್ ರೇ ಯಂತ್ರ ಕೊಡುಗೆ - ಶ್ರೀ ಸಾಯಿನಾಥ ಮತ್ತು ಶ್ರೀ ಸಾಯಿಬಾಬಾರವರ ಎರಡೂ ಆಸ್ಪತ್ರೆ

By

Published : Feb 9, 2023, 2:17 PM IST

Updated : Feb 14, 2023, 11:34 AM IST

ಶಿರಡಿ( ಮಹಾರಾಷ್ಟ್ರ): ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು 75ಲಕ್ಷ ರೂಪಾಯಿ ಮೌಲ್ಯದ ಪೋರ್ಟಬಲ್ ಎಕ್ಸ್ ರೇ ಯಂತ್ರವನ್ನು ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿರುವ ಶ್ರೀ ಸಾಯಿನಾಥ ಮತ್ತು ಶ್ರೀ ಸಾಯಿಬಾಬಾ ಅವರ ಎರಡೂ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಎಕ್ಸ್-ರೇ ಯಂತ್ರವನ್ನು  ರೋಗಿಗಳು ದಾಖಲಾಗಿರುವ ವಾರ್ಡ್‌ಗೆ ತೆಗೆದುಕೊಂಡು ಹೋಗಬಹುದಾಗಿದೆ.

 ಈ ಕಾರಣದಿಂದ ರೋಗಿಗಳು ತಕ್ಷಣದ ವರದಿಯನ್ನು ಪಡೆದು, ವೈದ್ಯರು ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಬಹುದಾಗಿದೆ.  ಈ ಡಿಜಿಟಲ್ ವ್ಯವಸ್ಥೆಯಿಂದಾಗಿ ವಿಕಿರಣದಿಂದ ರೋಗಿಗಳಿಗೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹೊಸ ಎಕ್ಸ್ ರೇ ಯಂತ್ರದ ಉದ್ಘಾಟನೆ  ಕಾರ್ಯಕ್ರಮದಲ್ಲಿ ಉಪ ವೈದ್ಯಕೀಯ ನಿರ್ದೇಶಕ ಡಾ.ಪ್ರೀತಮ್ ವಾಡಗಾವೆ, ಮಹೀಂದ್ರಾ ಫೌಂಡೇಶನ್‌ನ ಅಧಿಕಾರಿಗಳು, ಬಯೋಮೆಡಿಕಲ್ ವಿಭಾಗದ ಇಂಜಿನಿಯರ್ ಸೇರಿದಂತೆ  ವೈದ್ಯಾಧಿಕಾರಿಗಳು, ನರ್ಸ್‌ಗಳು, ದಾದಿಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ;ತೋಟದ ಮನೆಗೆ ನುಗ್ಗಿದ್ದ ಚಿರತೆಯನ್ನು ಕೂಡಿಹಾಕಿದ ಗ್ರಾಮಸ್ಥರು

Last Updated : Feb 14, 2023, 11:34 AM IST

ABOUT THE AUTHOR

...view details