6.5 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ: ಸಾಂಗ್ಲಿಯಲ್ಲಿ ಇಬ್ಬರ ಬಂಧನ - ETV Bharat kannada News
ಸಾಂಗ್ಲಿ( ಮಹಾರಾಷ್ಟ್ರ):ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ಬೆಲೆಬಾಳುವ ಅಂಬರ್-ಗ್ರೀಸ್(ತಿಮಿಂಗಿಲ ವಾಂತಿ) ಯನ್ನು ಆಕ್ರಮವಾಗಿ ಮಾರಟ ಮಾಡಲು ಯತ್ನಿಸುತ್ತಿದ ಇಬ್ಬರನ್ನು ಸಾಂಗ್ಲಿ ಪೊಲೀಸರು ಬಂಧಿಸಿದ್ದಾರೆ. ಭರ್ಜರಿ ಕಾರ್ಯಾಚರಣೆಯಲ್ಲಿ ಸಲೀಂ ಪಟೇಲ್ ಮತ್ತು ಅಕ್ಬರ್ ಶೇಖ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಬರೋಬ್ಬರಿ 6.5 ಕೋಟಿ ಮೌಲ್ಯದ 8 ಬಾಕ್ಸ್ನಲ್ಲಿ ತುಂಬಿದ್ದ ಅಂಬರ್ ಗ್ರೀಸ್ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಕೊಲ್ಹಾಪುರ ವಲಯದ ವಿಶೇಷ ಪೊಲೀಸ್ ಮಹಾನಿರೀಕ್ಷಕ ಸುನಿಲ್ ಫುಲಾರಿ ಅವರು, ಸಾಂಗ್ಲಿಯ ಶಾಮರಾವ್ ನಗರದ ಎಪಿಜೆ ಅಬ್ದುಲ್ ಕಾಲೇಜು ಬಳಿ, ಅಂಬರ್ ಗ್ರೀಸ್ ಮಾರಾಟ ಮಾಡಲು ಆರೋಪಿಗಳು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ನಮ್ಮ ಇಲಾಖೆಗೆ ಸಿಕ್ಕಿತು. ತತ್ಕ್ಷಣವೇ ಕಾರ್ಯಾಚರಣೆಗೆ ಸ್ಥಳೀಯ ಅಪರಾಧ ತನಿಖಾ ದಳದ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ತೇಲಿ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಯಿತು.
ಬಳಿಕ ಆರೋಪಿಗಳು ಇದ್ದ ಸ್ಥಳಕ್ಕೆ ಹೋದ ಪೊಲೀಸರು ಅರೋಪಿಗಳನ್ನು ಪ್ರಶ್ನಿಸಿದ್ದರು. ಈ ವೇಳೆ, ಇಬ್ಬರೂ ಹಾರಿಕೆಯ ಉತ್ತರ ನೀಡಿದ್ದರು. ಇದರಿಂದ ಇನ್ನೂ ಹೆಚ್ಚು ಅನುಮಾನಗೊಂಡ ಪೊಲೀಸ್ ಅಧಿಕಾರಿಗಳು ಬ್ಯಾಗ್ ಪರಿಶೀಲನೆ ನಡೆಸಿದಾಗ ತಿಮಿಂಗಲ ವಾಂತಿ ಇರುವುದು ಪತ್ತೆಯಾಗಿತ್ತು. ಅಂಬರ್ ಗ್ರೀಸ್ ಎಂದು ಕರೆಯುವ ಈ ತಿಮಿಂಗಲ ವಾಂತಿಯನ್ನು ಹೆಚ್ಚಾಗಿ ಸುಗಂಧ ದ್ರವ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಇದು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಮಾರಾಟ ಮತ್ತು ಸ್ವಾಧೀನವನ್ನು ನಿಷೇಧಿಸಲಾಗಿದೆ. ಇದರಿಂದ ಪೊಲೀಸರು ಇಬ್ಬರ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದು, ಹೆಚ್ಚಿ ತನಿಖೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ :ಹಲ್ಲಿನಿಂದಲೇ 165 ಕೆಜಿ ಭಾರದ ಸಿಮೆಂಟ್ ಕಲ್ಲು ಎತ್ತಿ ವಿಶ್ವದಾಖಲೆ!- ವಿಡಿಯೋ